Menu

ಬೆಂಗಳೂರಿನ ಬೀದಿ ನಾಯಿಗಳಿಗೆ ಊಟಕ್ಕಾಗಿ 2.8 ಕೋಟಿ ರೂ. ಟೆಂಡರ್ ಆಹ್ವಾನ

ಬೆಂಗಳೂರಿನ ಬೀದಿ ನಾಯಿಗಳ ಹೊಟ್ಟೆ ತುಂಬಿಸಲು ಯೋಜನೆ ಹಮ್ಮಿಕೊಂಡು ಬಿಬಿಎಂಪಿಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ಊಟ ಹಾಕಿಸುವುದಕ್ಕಾಗಿ 2.8 ಕೋಟಿ ರೂ. ಟೆಂಡರ್ ಕರೆಯಲಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌ ಮಾಹಿತಿ ನೀಡಿದ್ದು, ಬೀದಿ ನಾಯಿಗಳು ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ದಾಳಿ ನಡೆಸುವ ಪ್ರಕರಣಗಳನ್ನು ತಡೆಯುವ ಉದ್ದೇಶದೊಂದಿಗೆ ಯೋಜನೆ ಆರಂಭಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ. ಊಟ ಹಾಕಿ ಹೊಟ್ಟೆ ತುಂಬಿಸುವುದರಿಂದ ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಲಾರವು. ಈಗಾಗಲೇ ಕೆಲವು ವಾರ್ಡ್​​ಗಳಲ್ಲಿ 100 ನಾಯಿಗಳಿಗೆ 2-3 ತಿಂಗಳು ಊಟ ಹಾಕಿ ಪ್ರಯೋಗ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೀದಿ ನಾಯಿಗಳಿಗೆ ಎಗ್ ರೈಸ್, ಚಿಕನ್ ರೈಸ್ ಸೇರಿದಂತೆ ಕ್ಯಾಲೊರಿಯುಕ್ತ ಆಹಾರ ನೀಡಲು ಬಿಬಿಎಂಪಿ ಉದ್ದೇಶಿಸಿದೆ. ರೆಸ್ಟೋರೆಂಟ್, ಹೊಟೇಲ್ ಹಾಗೂ ಇತರ ಸಂಸ್ಥೆಗಳ ಸಹಕಾರದಲ್ಲಿ ಬೀದಿ ನಾಯಿಗಳಿಗೆ ಊಟ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಬಿಬಿಎಂಪಿಯ ಪಶುಸಂಗೋಪನಾ ಜಂಟಿ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಖರೀದಿ ಪೋರ್ಟಲ್ ಅಡಿ ಬಿಬಿಎಂಪಿಯ 8 ವಲಯಗಳಲ್ಲಿ ನಾಯಿಗಳಿಗೆ ಆಹಾರ ಸೇವೆ ಒದಗಿಸಲು 1 ವರ್ಷದ ಅವಧಿಗೆ ಹೊರಗುತ್ತಿಗೆ ನೀಡಲಾಗುವುದು. ಗುತ್ತಿಗೆ ಪಡೆದವರು ಒದಗಿಸಿದ ಸೇವೆಗಳು ತೃಪ್ತಿಕರವಾಗಿದ್ದರೆ ಇನ್ನೂ 1 ವರ್ಷ ವಿಸ್ತರಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ಬೀದಿ ನಾಯಿಗಳಿಗೆ 700 ರಿಂದ 750 ಕ್ಯಾಲೊರಿಯ ಆಹಾರ ಸಿದ್ಧಪಡಿಸುವುದಕ್ಕಾಗಿ ಮೆನು ಈಗಾಗಲೇ ಸಿದ್ಧಗೊಂಡಿದೆ, ಬಿಡ್ಡರ್​ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡುಗೆ ಮನೆ ಹೊಂದಿದ್ದು, ಆಹಾರ ತಯಾರಿಸಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳ ಆಯ್ಕೆ ಮಾಡಬೇಕು. ಸ್ವಯಂಸೇವಕರ ಜತೆ ಸೇರಿಕೊಂಡು ಆಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು .ಬಳಿಕ ಆ ಜಾಗವನ್ನು ಸ್ವಚ್ಛಗೊಳಿಸಿ ನಮಗೆ ವರದಿ ಸಲ್ಲಿಸಬೇಕು. ಎಷ್ಟು ನಾಯಿಗಳಿಗೆ ಆಹಾರ ನೀಡಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಸೂರಳ್ಕರ್‌ ವಿಕಾಸ್‌ ಕಿಶೋರ್‌ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *