ಭಾರತೀಯ ಸೇನಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ಜಮ್ಮುವಿನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಭಾರತದ ಸೈನ್ಯದ ಜೊತೆ ಹೋರಾಡುವ ಶಕ್ತಿ ಇಲ್ಲ, ಅದಕ್ಕೆ ನಾಗರಿಕರ ಮೇಲೆ ದಾಳಿ ಮಾಡುತ್ತಿದೆ, ಇಂದು ಬೆಳಗ್ಗೆ ಹಲವು ಬಾರಿ ಸ್ಫೋಟದ ಸದ್ದು ಕೇಳಿದೆ ಎಂದು ಜಮ್ಮುವಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾ ಗಿದೆ. ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಗಡಿ ಗ್ರಾಮಗಳಿಂದ ಸುಮಾರು 10,000 ನಿವಾಸಿಗಳನ್ನು ಸ್ಥಳಾಂತ ರಿಸಲಾಗುತ್ತಿದೆ. ಪಾಕ್ ದಾಳಿಯಿಂದ ಪೂಂಚ್ ಜಿಲ್ಲೆ ಮಾತ್ರವಲ್ಲದೆ, ಉರಿ, ಬಾರಾಮುಲ್ಲಾ, ಕರ್ನಾ, ತಂಗ್ಧರ್, ಮೆಂಧರ್ ಸೇರಿದಂತೆ ವಿವಿಧೆಡೆ ನಾಗರಿಕರ ಮನೆ ಹಾಗೂ ಅಂಗಡಿ, ಮಳಿಗೆಗಳು ಹಾನಿಗೊಂಡಿವೆ.
ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳು ಇಂದು ಕೂಡಾ ಬಂದ್ ಆಗಿದ್ದು, ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲಾಗಿದೆ. ಭಾರತೀಯ ರಕ್ಷಣಾ ಪಡೆಗಳಕಾರ್ಯಾಚರಣೆಯಿಂದ ಕಂಗೆಟ್ಟ ಪಾಕಿಸ್ತಾನದ ಸಿಂಧ್, ಪಂಜಾಬ್ ಕಂಟೋನ್ಮೆಂಟ್‌ಗಳಲ್ಲಿ ಭೀತಿ ಹೆಚ್ಚಾಗಿದೆ. ಹೀಗಾಗಿ ಮಿಲಿಟರಿ ಕಂಟೋನ್ಮೆಂಟ್‌ಗಳನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡಿಕೊಳ್ಳುತ್ತಿದೆ.