Menu

ಕಿರುತೆರೆ ನಟಿ ಕಾವ್ಯಾ ಗೌಡ ಮೇಲೆ ಹಲ್ಲೆ, ಪತಿಗೆ ಚಾಕು ಇರಿತ!

kavya gowda

ಕನ್ನಡ ಕಿರುತೆರೆ ಟನಿ ಕಾವ್ಯಾ ಗೌಡ ಮೇಲೆ ಹಲ್ಲೆ ನಡೆಸಿರುವ ಸಂಬಂಧಿಕರು ಪತಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

‘ರಾಧಾ ರಮಣ’, ‘ಗಾಂಧಾರಿ’ ಧಾರಾವಾಹಿಗಳ ನಟಿ ಕಾವ್ಯ ಗೌಡ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ನಟಿ ಕಾವ್ಯ ಗೌಡ ಗಳಿಸಿರುವ ಜನಪ್ರಿಯತೆಯನ್ನು ಸಿಹಿಸದೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಟಿ ಕಾವ್ಯಾ ಗೌಡ ಕೆಲ ವರ್ಷಗಳ ಹಿಂದೆ ಉದ್ಯಮಿ ಸೋಮಶೇಖರ್ ಅವರನ್ನು ಮದುವೆ ಆಗಿದ್ದಾರೆ. ಸೋಮಶೇಖರ್ ಹಾಗೂ ನಂದೀಶ್ ಸಹೋದರರು. ಸೋಮಶೇಖರ್- ಕಾವ್ಯಾ ದಂಪತಿ ಮತ್ತು ನಂದೀಶ್ -ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಕಾವ್ಯಾ ಮತ್ತು ಪ್ರೇಮಾ ಮಧ್ಯೆ ಮನಸ್ತಾಪ ಆಗುತ್ತಲೇ ಇತ್ತು. ಇತ್ತೀಚೆಗೆ ಕಾವ್ಯಾ ಮತ್ತು ಪ್ರೇಮಾ ಸಂಬಂಧಿಕರು ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಗಲಾಟೆಯಾಗಿದೆ.

ಸಂಬಂಧಿಯಿಂದಲೇ ಹಲ್ಲೆ ಆರೋಪ

ಕಾವ್ಯಾ ಕುಟುಂಬದ ಸಂಬಂಧಿ ರವಿಕುಮಾರ್, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ. ಮನೆಗೆ ನುಗ್ಗಿ‌ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಕಾವ್ಯಾ ಗೌಡಗೆ ರೇಪ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಕಾವ್ಯಾ ಮೇಲೂ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೋಮಶೇಖರ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾವ್ಯಾ ಅಕ್ಕ ಭವ್ಯಾ ಗೌಡ ಅವರು ಪ್ರೇಮ, ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರವಿಕುಮಾರ್‌ ಹೇಳಿದ್ದೇನು?

ಆಸ್ತಿಗೋಸ್ಕರ ಈ ಕಲಹ ನಡೆದಿದೆ. ನನ್ನ ಮಗಳನ್ನು ಹೊರಗಡೆ ಹಾಕಬೇಕು ಎಂದು ಈ ರೀತಿ ಮಾಡಲಾಗಿದೆ. ನಮಗೆ ಮನೆ ಬಿಟ್ಟುಕೊಡಿ ಎಂದು ಕಾವ್ಯಾ ಗೌಡ ಗಲಾಟೆ ಮಾಡಿದ್ದಾರೆ. ರೇವಣ್ಣ ಕಾರ್ಪೋರೇಟರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಕಾವ್ಯಾ ಮದುವೆ ಆದಾಗಿನಿಂದಲೂ ಈ ಜಗಳ ನಡೆಯುತ್ತಿದೆ ಎಂದು ರವಿಕುಮಾರ್‌ ಪ್ರತಿದೂರು ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *