`ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಸದ್ದುಗದ್ದಲವಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬ್ರಹ್ಮಗಂಟು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಭಾರತಿ ಭಟ್ ಜೀ ಟಿವಿಯಲ್ಲೊ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯೂ ಆಗಿದ್ದರು.
ಇತ್ತೀಚೆಗೆ ಭಾರತಿ ಭಟ್ ಬ್ರಹ್ಮಾವರ ರಾಜಾರಾಮ್ ಭಟ್ ಎಂಬುವರ ಅವರನ್ನು ವರಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಮದುವೆ ವಿಷಯ ಬಹಿರಂಗಪಡಿಸಿದ್ದಾರೆ.
ಗೀತಾ ಭಾರತಿ ಭಟ್ `ಅಂಬಿನಿಂಗ್ ವಯಸ್ಸಾಯ್ತೋ’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸ್ಕೊಂಡಿದ್ದರು. ಆದರೆ ಸಿನಿಮಾಗಳಿಗಿಂತ ಕಿರುತೆರೆಯಲ್ಲೇ ಗೀತಾ ಭಾರತಿ ಭಟ್ ಹೆಚ್ಚು ಜನಪ್ರಿಯರು. ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ. ಗಾಯಕಿಯೂ ಆಗಿರುವ ಗೀತಾ ಭಾರತಿ ಭಟ್ ಹಿಂದೆ ಬಾಡಿ ಶೇಮಿಂಗ್ ಅನುಭವಿಸಿದ್ದರು.
ಸಂಪ್ರದಾಯಸ್ಥ ಮಧ್ಯಮ ಕುಟುಂಬದಲ್ಲಿ ಬೆಳೆದ ಗೀತಾ ಭಾರತಿ ಭಟ್ ಅಭಿನಯದಲ್ಲಿ ಚತುರೆ. ಇದೀಗ ಗೀತಾ ಭಾರತಿ ಭಟ್ ಮದುವೆಗೆ ಅವರ ಸೀರಿಯಲ್ ಬಳಗದ ಆಪ್ತವರ್ಗ ಸಾಕ್ಷಿಯಾಗಿತ್ತು. ಮದುವೆಯ ಬಳಿಕವೂ ಗೀತಾ ಭಾರತಿ ಭಟ್ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.


