Menu

16 ಉಪಗ್ರಹ ಹೊತ್ತು ಹೊರಟಿದ್ದ PSLV-C62ನಲ್ಲಿ ತಾಂತ್ರಿಕ ದೋಷ, ಪಥ ಬದಲು: ಇಸ್ರೊ

ಆಂಧ್ರಪ್ರದೇಶದ ಶ್ರೀಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪಥ ಬದಲಾಯಿಸಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ಡಿಆರ್‌ಡಿಒ ನಿರ್ಮಿತ ಅನ್ವೇಷ ಹೆಸರಿನ ಭೂ ವೀಕ್ಷಣಾ ಉಪಗ್ರಹ (EOS-N) ಮತ್ತು ನಾನಾ ದೇಶಗಳಿಗೆ ಸೇರಿದ ಒಟ್ಟು 15 ಉಪಗ್ರಹಗಳು ಈ ರಾಕೆಟ್‌ನಲ್ಲಿ ಅಂತರಿಕ್ಷ ಸೇರಬೇಕಿತ್ತು. ಇದು PSLV ಯ 64 ನೇ ಹಾರಾಟವಾಗಿದ್ದು, ಭೂ ವೀಕ್ಷಣಾ ಉಪಗ್ರಹ “EOS-N1” ಅನ್ನು ಪ್ರಾಥಮಿಕ ಪೇಲೋಡ್ ಆಗಿ ಹೊತ್ತೊಯ್ದಿತ್ತು. ಈ ಉಪಗ್ರಹವನ್ನು ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಜಂಟಿ ತಂತ್ರಜ್ಞಾನನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.

ಉಡಾವಣೆಯ 17 ನಿಮಿಷಗಳ ನಂತರ ಎಲ್ಲಾ ಉಪಗ್ರಹಗಳನ್ನು ಸೂರ್ಯ-ಸಿಂಕ್ರೊನಸ್ ಕಕ್ಷೆಗೆ ಸೇರಬೇಕಿತ್ತು. PSLV ಇಲ್ಲಿಯವರೆಗೆ 63 ಹಾರಾಟಗಳನ್ನು ಪೂರ್ಣಗೊಳಿಸಿದೆ. ಇದು ನಿಗದಿತ ಕಕ್ಷೆ ಸೇರಿದ್ದರೆ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ದ್ರವಗಳ (ಇಂಧನಗಳು) ನಡವಳಿಕೆಯನ್ನು ಅಧ್ಯಯನ ಮಾಡಲು AULSAT ಗುರಿ ಉಪಗ್ರಹವಾಗಿ ಕಾರ್ಯನಿರ್ವಹಿಸುತ್ತಿತ್ತು.

ಇಸ್ರೋ ಮತ್ತು ಆರ್ಬಿಟ್‌ಏಡ್‌ನ ಈ ಪ್ರಯತ್ನವು ಭಾರತವನ್ನು ಬಾಹ್ಯಾಕಾಶದಲ್ಲಿ ಉಪಗ್ರಹ ಸೇವೆ ಮತ್ತು ಇಂಧನ ತುಂಬುವಿಕೆಯಲ್ಲಿ ಎರಡನೇ ಅತಿದೊಡ್ಡ ಜಾಗತಿಕ ನಾಯಕನನ್ನಾಗಿ ಮಾಡುವ ನಿರೀಕ್ಷೆಯಿತ್ತು, ಅದರ ಅದು ಗುರಿ ತಲುಪಿಲ್ಲ.

Related Posts

Leave a Reply

Your email address will not be published. Required fields are marked *