ಆನೇಕಲ್‌ನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ರಾಕೇಶ್ ಎಂಬಾತ ಪತ್ನಿ ಗೌರಿ ಅನಿಲ್ ಸಾಂಬೇಕರ್ ಎಂಬಾಕೆಯನ್ನು ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬಿ ಅದನ್ನು ಬಾತ್‌ರೂಂನಲ್ಲಿ ಇರಿಸಿ ಪರಾರಿಯಾಗಿದ್ದ. ಆತನನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗೌರಿ ಅನಿಲ್ ಸಾಂಬೇಕರ್ ಮತ್ತು ರಾಕೇಶ್ ಮಹಾರಾಷ್ಟ್ರ ಮೂಲದ ದಂಪತಿ, ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಒಂದು ತಿಂಗಳ ಹಿಂದೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ರಾಕೇಶ್ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೌರಿ ಕೆಲಸದ ಹುಡುಕಾಟ ದಲ್ಲಿದ್ದರು.
ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್ ವರ್ಕ್ ಫ್ರಂ ಹೋಮ್‌ನಲ್ಲೇ ಕೆಲಸ ನಿರ್ವಹಿಸ್ತಿದ್ದ. ಹೆಂಡತಿಯ ಕೊಲೆಗೈದು ಪರಾರಿಯಾಗಿದ್ದ ಆತ ಅದೇ ಬಿಲ್ಡಿಂಗ್‌ನಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಗೆ ಕರೆ ಮಾಡಿ ಹೆಂಡತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟಿರೋದಾಗಿ ಹೇಳಿದ್ದ. ಅವರು ಕೂಡಲೇ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂ, ಸೋಕೊ ಟೀಂ ಜೊತೆ ಬಂದ ಹುಳಿಮಾವು ಪೊಲೀಸರಿಗೆ ಕೊಲೆಯಾಗಿ ರುವುದು ದೃಢಪಟ್ಟಿದೆ. ಹೆಂಡತಿಯ ದೇಹವನ್ನು ಅರ್ಧ ಕತ್ತರಿಸಿ ಹೊಟ್ಟೆಭಾಗ ಕೊಯ್ದು ಸೂಟ್‌ಕೇಸ್‌ನಲ್ಲಿ ತುರುಕಿ, ಟಾಯ್ಲೆಟ್ ರೂಂನಲ್ಲಿಟ್ಟು ಆರೋಪಿ ಪರಾರಿ ಯಾಗಿದ್ದ.
ರಾತ್ರಿ ಊಟದ ಸಮಯಕ್ಕೆ ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿ ಆರೋಪಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯ ಸಿಡಿಆರ್ ಜಾಡು ಹಿಡಿದ ಪೊಲೀಸರು ಪುಣೆಯ ಶಿರವಾಲ್ ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಗೌರಿ ಪೋಷಕರಿಗೆ ವಿಚಾರ ತಿಳಿಸಲಾ ಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.