ಕೋಲಾರ ಜಿಲ್ಲೆಯ ನರಸಾಪುರ ಗ್ರಾಮದಲ್ಲಿ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಶಿಕ್ಷಕಿ ಅಖ್ತರ್ ಬೇಗಂ (50) ಕಾಣೆಯಾಗಿದ್ದು, ಬೇತಮಂಗಲ ಹೋಬಳಿಯ ಐಪಲ್ಲಿ ಅಮಾನಿ ಕರೆಯಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾಳೆ.
ಬೇತಮಂಗಲ ಪಟ್ಟಣದ ಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಪಲ್ಲಿ ಅಮಾನಿಕೆರೆಯ ದಡದಲ್ಲಿ ಶಿಕ್ಷಕಿಯ ಬ್ಯಾಕ್ ಪತ್ತೆಯಾಗಿದ್ದು ಸಾರ್ವಜನಿಕರು ಬ್ಯಾಗನ್ನು ಗಮನಿಸಿ ಕೆರೆ ಕಡೆ ನೋಡಿದಾಗ ಕೆರೆಯಲ್ಲಿ ಶವ ತೆಲುತ್ತಿದ್ದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಬೇತಮಂಗಲ ಪೊಲೀಸ್ ಠಾಣೆಯ ಸಿಪಿಐ ರಂಗಸ್ವಾಮಯ್ಯ ಪಿಎಸ್ಐ ಗುರುರಾಜ್ ನೇತೃತ್ವದಲ್ಲಿ ಅಗ್ನಿಶಾಮಕ ಮತ್ತು ಸ್ಥಳೀಯರ ನೆರವಿನೊಂದಿಗೆ ಶವವನ್ನು ಕೆರೆಯಿಂದ ತೆಗೆದು ಕೆಜಿಎಫ್ ನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯ ಕಷ್ಟಕರವಾಗಿದ್ದರಿಂದ ಅವರು ಮಾನಸಿಕ ಒತ್ತಡ ಅನುಭವಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ 15 ದಿನಗಳಿಂದ ಇದೆ ಒತ್ತಡದಿಂದ ಚಿಂತೆಗೀಡಾಗಿದ್ದು ಅಖ್ತರ್ ಬೇಗಂ ಸೋಮವಾರ ಬೆಳಗ್ಗೆ ಮಗನ ಬೈಕ್ ನಲ್ಲಿ ಬಸ್ ನಿಲ್ದಾಣದವರೆಗೆ ಡ್ರಾಪ್ ಪಡೆದುಕೊಂಡಿದ್ದಾರೆ ಈ ವೇಳೆ ತಮ್ಮ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಇದನ್ನು ಕಂಡ ಪೋಷಕರು ಮರೆತುಹೋಗಿರಬಹುದು ಎಂದು ಭಾವಿಸಿದ್ದರು.
ಸೋಮವಾರ ರಾತ್ರಿಯಾದರೂ ಮನೆಗೆ ವಾಪಸ್ ಬರದೆ ಇದ್ದಾಗ ಕುಟುಂಬದವರು ಗಾಬರಿಗೊಂಡು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಈ ಬಗ್ಗೆ ಅನೇಕ ಕಡೆ ಪತ್ತೆ ಹಚ್ಚಿದರು ತೆಲುಗು ಸಿಕ್ಕಿರಲಿಲ್ಲ ಸಮೀಕ್ಷೆ ಕಾರ್ಯದಲ್ಲಿ ಸಾರ್ವಜನಿಕರು ಸರಿಯಾಗಿ ಸ್ಪಂದಿಸದೆ ಸಮೀಕ್ಷೆಯ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ ಇದರಿಂದ ಹಿರಿಯ ಅಧಿಕಾರಿಗಳ ಕಡೆಯಿಂದಲೂ ಒತ್ತಡ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ದಿನಗಳ ನಂತರ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯಪಲ್ಲಿ ಗ್ರಾಮದ ಅಮಾನಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಮೀಕ್ಷೆಯ ಒತ್ತಡದಿಂದಲೇ ಶಿಕ್ಷಕಿ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗ್ತಿದೆ, ತನಿಖೆ ಬಳಿಕ ಶಿಕ್ಷಕಿ ಸಮೀಕ್ಷೆ ಒತ್ತಡದಿಂದ ಅಥವಾ ಬೇರೆ ಯಾವುದಾದರೂ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಲಿದೆ.