Menu

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು

mk stalin

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೆಳಗ್ಗೆ ವಾಕ್‌ ಮಾಡುವಾಗ ಸ್ವಲ್ಪ ತಲೆಸುತ್ತು ಬಂದಿದೆ. ಅವರನ್ನು ಚೆನ್ನೈ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರನ್ನು ಪರೀಕ್ಷಿಸಿ, ಅಗತ್ಯ ಟೆಸ್ಟ್‌ಗಳನ್ನು ಮಾಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಅಪೋಲೋ ಆಸ್ಪತ್ರೆಗಳು ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ವೈದ್ಯಕೀಯ ಸೇವೆಗಳ ನಿರ್ದೇಶಕರಾದ ಡಾ. ಅನಿಲ್ ಬಿಜಿ, ಮುಖ್ಯಮಂತ್ರಿಯ ರೋಗಲಕ್ಷಣಗಳ ಸಂಪೂರ್ಣ ತಪಾಸಣೆಗಾಗಿ ಅವರನ್ನು ಕರೆತರಲಾಗಿದೆ. ಅಗತ್ಯ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೇಗನೆ ಚೇತರಿಸಿಕೊಳ್ಳಲಿ ಮತ್ತು ಕರ್ತವ್ಯಗಳನ್ನು ಪುನರಾರಂಭಿಸಲಿ ಎಂದು ಅವರು ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ಹಾರೈಸಿದ್ದಾರೆ.

Related Posts

Leave a Reply

Your email address will not be published. Required fields are marked *