Thursday, January 30, 2025
Menu

ಐಎಂಟೆಕ್ಸ್-2025ರಲ್ಲಿ ಮುಂದಿನ ಪೀಳಿಗೆಯ ಉತ್ಪಾದನಾ ಸಾಧನ ತೈವಾನ್ ಎಕ್ಸಲೆನ್ಸ್ ಅನಾವರಣ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಯಂತ್ರೋಪಕರಣಗಳು ಮತ್ತು ಉತ್ಪಾದನಾ ವಲಯದ ಪ್ರಮುಖ ವಸ್ತು ಪ್ರದರ್ಶನವಾದ ಐಎಂಟೆಕ್ಸ್-2025 ರಲ್ಲಿ ತೈವಾನ್ ಎಕ್ಸಲೆನ್ಸ್ (ಟಿಇ) ಗಮನಾರ್ಹ ಪರಿಣಾಮ ಬೀರುತ್ತಿದೆ.

ಈ ಪೆವಿಲಿಯನ್ ಎಎಕ್ಸ್‍ಐಎಸ್‍ಸಿಓ, ಆಟೊಗ್ರಿಪ್, ಸಿಎಚ್‍ಎಂಇಆರ್, ಎಚ್‍ಐಡಬ್ಲ್ಯುವಿಐನ್, ಆನರ್ ಸೀಕಿ, ಇನ್‍ಗ್ರಿಟ್, ಕ್ಯಾನ್‍ಫಾನ್, ಮೆಕಾಂ, ಪಲ್ಮರಿ, ಕ್ವಾಸೆರ್, ಓಎಸ್‍ಸಿಎಆರ್‍ಮ್ಯಾಕ್ಸ್, ಸಿಂಟೆಲ್ ಮತ್ತು ಟಿಬಿಐ ಮೋಷನ್ ಸೇರಿದಂತೆ 13 ಖ್ಯಾತ ತೈವಾನಿ ಬ್ರಾಂಡ್‍ಗಳ ನೆಕ್ಸ್ಟ್-ಜೆನ್ ಉತ್ಪಾದನಾ ಪರಿಕರಗಳನ್ನು ಅನ್ವೇಷಿಸಲು ವಿಶೇಷ ಅವಕಾಶವನ್ನು ನೀಡುತ್ತದೆ.

ಭಾರತವು ತೈವಾನೀಸ್ ಯಂತ್ರೋಪಕರಣಗಳ ನಾಲ್ಕನೇ-ಅತಿದೊಡ್ಡ ಆಮದುದಾರನಾಗಿರುವುದರಿಂದ, ಪ್ರದರ್ಶನದಲ್ಲಿ ಟಿಇ ಯ ಉಪಸ್ಥಿತಿಯು ನವೀನ ಪ್ರಗತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಎರಡು ರಾಷ್ಟ್ರಗಳ ನಡುವಿನ ಬಲವರ್ಧನೆಯ ವ್ಯಾಪಾರ ಪಾಲುದಾರಿಕೆಯನ್ನು ಸೂಚಿಸುತ್ತದೆ. 2024 ರಲ್ಲಿ, ತೈವಾನ್‍ನ ಮೆಷಿನ್ ಟೂಲ್ ಉದ್ಯಮವು ಭಾರತದಲ್ಲಿ ಹೊಸ ಅವಕಾಶಗಳನ್ನು ಗಳಿಸಿತು, ರಫ್ತುಗಳು ವರ್ಷದಿಂದ ವರ್ಷಕ್ಕೆ ಪ್ರಭಾವಶಾಲಿ ಪ್ರಮಾಣದಲ್ಲಿ ಅಂದರೆ 20.8% ರಷ್ಟು ಹೆಚ್ಚುತ್ತಿದ್ದು, 145.87 ದಶಲಕ್ಷ ಡಾಲರ್ ತಲುಪಿದೆ.

ಪ್ರದರ್ಶನವು ಇಂದಿನಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ 23 ರಿಂದ 29 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿದೆ. ಪ್ರದರ್ಶನದ ಸಮಯದಲ್ಲಿ, ಟಿಇ ಪೆವಿಲಿಯನ್ ಭಾರತದ ಉತ್ಪಾದನಾ ವಲಯವನ್ನು ವಿಸ್ತøತಗೊಳಿಸುವ 17 ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ.

ಮೊದಲ ದಿನ, ಟಿಇ ಯು “ಕ್ರಾಫ್ಟಿಂಗ್ ಎಕ್ಸಲೆನ್ಸ್ ಫಾರ್ ಎ ಪೆÇ್ರೀಗ್ರೆಸ್ಸಿವ್ ಟುಮಾರೊ” ಎಂಬ ಶೀರ್ಷಿಕೆಯ ಹೈಟೆಕ್ ಉತ್ಪನ್ನ ಬಿಡುಗಡೆ ಅಧಿವೇಶನವನ್ನು ಆಯೋಜಿಸಿತು, ಚೆಮರ್, ಕ್ವೇಸರ್, ಪಾಲ್ಮರಿ, ಸಿಂಟೆಕ್ ಮತ್ತು ಹೈವಿನ್ ಸೇರಿದಂತೆ ಐದು ಪ್ರಮುಖ ಬ್ರಾಂಡ್‍ಗಳಿಂದ ಅದ್ಭುತ ತಂತ್ರಜ್ಞಾನಗಳನ್ನು ಅನಾವರಣಗೊಳಿಸಿತು.

Related Posts

Leave a Reply

Your email address will not be published. Required fields are marked *