world news
ಕೊಲಂಬಿಯಾ ಗಡಿಯಲ್ಲಿ ವಿಮಾನ ಪತನ: ಸಂಸದ ಸೇರಿ 15 ಜನ ಸಾವು
ಕೊಲಂಬಿಯಾ-ವೆನೆಜುವೆಲಾ ಗಡಿ ಸಮೀಪ ವಿಮಾನ ಪತನಗೊಂಡು ಅದರಲ್ಲಿದ್ದ ಸಂಸದ, ಸಿಬ್ಬಂದಿ ಸೇರಿದಂತೆ 15 ಜನ ಪ್ರಾಣ ಕಳೆದುಕೊಂಡಿದ್ದಾರೆ ದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ವಿಮಾನ ಕುಕುಟಾದಿಂದ ಹೊರಟು ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು, ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ. ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಿದೆ. ಒಬ್ಬರು ಸಂಸದ ಮತ್ತು ಒಬ್ಬರು ಚುನಾವಣಾ ಅಭ್ಯರ್ಥಿ ವಿಮಾನದಲ್ಲಿದ್ದರು
ವಾಟ್ಸಾಪ್ಗೂ ಇನ್ಮುಂದೆ ಸಬ್ಸ್ಕ್ರಿಪ್ಷನ್?
ವಾಟ್ಸಾಪ್ ಬಳಕೆದಾರರಿಗೆ ಇಷ್ಟು ದಿನ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತಿದ್ದ ಮೆಸೇಜಿಂಗ್ ಸೇವೆಗೆ ಇನ್ನು ಮುಂದೆ ಹಣ ಪಾವತಿಸಬೇಕಾದ ದಿನಗಳು ದೂರವಿಲ್ಲ. ಡೇಟಾ ರೀಚಾರ್ಜ್ ಜೊತೆಗೆ ಮಾಸಿಕ ಸಬ್ಸ್ಕ್ರಿಪ್ಷನ್ ಬಗ್ಗಯೂ ಯೋಚಿಸಬೇಕಾಗುತ್ತದೆ. ಮಾರ್ಕ್ ಜುಕರ್ಬರ್ಗ್ ನೇತೃತ್ವದ ಮೆಟಾ ವಾಟ್ಸಾಪ್ ಮೂಲಕ ಆದಾಯ ಗಳಿಸಲು
ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಸೇವೆಯಿಂದ ನಿವೃತ್ತಿ
ಗಗನಯಾತ್ರಿ ಸುನೀತಾ ವಿಲಿಯಮ್ಸ್ ವೃತ್ತಿಜೀವನದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಯಾತ್ರೆಗಳನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದು, 27 ವರ್ಷಗಳ ಸುದೀರ್ಘ ಸೇವೆ ಬಳಿಕ ನಾಸಾದಿಂದ ನಿವೃತ್ತರಾಗಿದ್ದಾರೆ ಎಂದು ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರ ನಿವೃತ್ತಿ 2025ರ ಡಿಸೆಂಬರ್ 27ರಿಂದ ಜಾರಿಯಾಗುತ್ತಿದೆ ಎಂದು ನಾಸಾ
ಸ್ಪೇನ್ನಲ್ಲಿ ಹೈಸ್ಪೀಡ್ ರೈಲುಗಳ ಡಿಕ್ಕಿ: 21 ಮಂದಿ ಸಾವು
ಸ್ಪೇನ್ನ ಆಂಡಲೂಸಿಯಾದ ದಕ್ಷಿಣ ಭಾಗದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿಯಾಗಿ 21 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಲಗಾದಿಂದ ಮ್ಯಾಡ್ರಿಡ್ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿ ಹಳಿ ದಾಟಿ ಮುಂದೆ ಬರುತ್ತಿದ್ದ ರೈಲಿಗೆ
ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಭಾರತದ ಶೇ 30 ಸುಂಕ ವಾಪಸ್ಗೆ ಆಗ್ರಹ
ಕಳೆದ ನವೆಂಬರ್ನಲ್ಲಿ ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30 ಸುಂಕ ವಿಧಿಸಿರುವುದನ್ನು ಕಡಿಮೆ ಮಾಡಲು ಮಾತುಕತೆ ನಡೆಸುವಂತೆ ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್ಗಳು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒತ್ತಾಯಿಸಿದ್ದಾರೆ. ಮೊಂಟಾನಾ ಮತ್ತು ಉತ್ತರ
ಟ್ರಂಪ್ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ರು ವೆನೆಜುವೆಲಾದ ಕೊರಿನಾ ಮಚಾದೋ
2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾ ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾದೋ ಅವರು ತನಗೆ ಸಿಕ್ಕಿದ್ದ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಿದ್ದಾರೆ. ಶ್ವೇತಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಮಚಾದೊ ಅವರುನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ಕೊಟ್ಟಿದ್ದು, ನೊಬೆಲ್
ಪಾಕ್, ಬಾಂಗ್ಲಾ ಸೇರಿ 75 ದೇಶಗಳ ವಲಸಿಗರಿಗೆ ಅಮೆರಿಕ ವೀಸಾ ನಿರ್ಬಂಧ
ವಿದೇಶೀಯರ ನಿರ್ಬಂಧ ನೀತಿಯನುಸಾರ ಅಮೆರಿಕ ಸರ್ಕಾರ ಕೆಲವು ದೇಶಗಳ ನಿವಾಸಿಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ತಡೆ ಹಿಡಿಯಲಾಗಿದೆ. ಈ 75 ದೇಶಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಕೂಡ ಸೇರಿವೆ. ಅಮೆರಿಕದಲ್ಲಿರು ಉತ್ತಮ ಸಾಮಾಜಿಕ
ಇರಾನ್ ನಲ್ಲಿ ಹಿಂಸಾಚಾರ: 2000ಕ್ಕೂ ಅಧಿಕ ಜನರ ಸಾವು
ಕಳೆದೆರಡು ವಾರಗಳಿಂದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಇರಾನ್ ನಲ್ಲಿ ಇದುವರೆಗೆ ಕನಿಷ್ಠ 2000 ಜನರು ಬಲಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ನಡುವಿನ ಸಂಘರ್ಷದ ಲಾಭ ಪಡೆದ ಉಗ್ರರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಮೃತಪಟ್ಟವರಲ್ಲಿ ಭದ್ರತಾ ಸಿಬ್ಬಂದಿಯೂ
ಇರಾನ್ ಜೊತೆ ವ್ಯಾಪಾರ ಮಾಡುವವರಿಗೆ ಶೇ.25 ಸುಂಕ: ಟ್ರಂಪ್
ಇರಾನ್ನೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದು, ಈ ಕ್ರಮವು ತಕ್ಷಣವೇ ಜಾರಿಗೆ ಬರಲಿದೆ ಮತ್ತು ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೇನಾ ಕಾರ್ಯಾಚರಣೆ ಬೆದರಿಕೆ ಬಳಿಕ ಮಾತುಕತೆಗೆ ಇರಾನ್ ಮನವಿ: ಟ್ರಂಪ್
ಇರಾನ್ನಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ನಲ್ಲಿ




