Menu

ಕೊಪ್ಪಳದಲ್ಲಿ ಅನಿಲ ಸೋರಿಕೆಗೆ ಕಾರ್ಮಿಕ ಬಲಿ , ಹಲವರು ಅಸ್ವಸ್ಥ

ಕೊಪ್ಪಳ ತಾಲೂಕಿನ ಅಲ್ಲಾನಗರದಲ್ಲಿ ಸ್ಟೀಲ್‌ ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆ ಉಂಟಾಗಿ ಕಾರ್ಖಾನೆಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದು,  ಎಂಟಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಟ್ಯಾಂಕ್ ಸೋರಿಕೆ ಉಂಟಾಗಿ ಕಾರ್ಮಿಕ ಮಾರುತಿ (24) ಉಸಿರುಗಟ್ಟಿ ಅಸು ನೀಗಿದ್ದಾರೆ. ಅಸ್ವಸ್ಥಗೊಂಡ ಎಂಟಕ್ಕೂ ಅಧಿಕ ಕಾರ್ಮಿಕರನ್ನು ನಗರದ ಕೆ.ಎಸ್.ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮುನಿರಾಬಾದ್ ಠಾಣಾ