Menu

ಪತ್ನಿ, ಪ್ರೇಯಸಿ ಸೇರಿ ಆಹಾರದಲ್ಲಿ ಮಾದಕ ದ್ರವ್ಯ ಬೆರಸಿ ವ್ಯಕ್ತಿಯ ಕೊಲೆ

ಉತ್ತರ ಪ್ರದೇಶದ ಇಟಾವಾದಲ್ಲಿ ಜಿಂದಾಲ್ ಕಂಪನಿಯ ಎಂಜಿನಿಯರ್ ರಾಘವೇಂದ್ರ ಯಾದವ್ ಎಂಬಾತನನ್ನು ಆತನ ಪತ್ನಿ ಮತ್ತು ಪ್ರೇಯಸಿ ಸೇರಿ ಕೊಂದಿದ್ದಾರೆ. ರಾಘವೇಂದ್ರ ಯಾದವ್ ಮದುವೆಯಾಗಿದ್ದ. ಆತ ಇನ್ನೊಬ್ಬ ಹುಡುಗಿ ಜೊತೆ ಸಂಬಂಧ ಬೆಳೆಸಿಕೊಂಡಿದ್ದ. ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದ. ಮನೆಯಲ್ಲಿ ಹೆಂಡತಿಯನ್ನು ಹೊಡೆಯುತ್ತಿದ್ದ. ಆತನ ಮೃತದೇಹವು ಕೆಲವು ದಿನಗಳ ಹಿಂದೆ ಹಾಸಿಗೆಯ ಮೇಲೆ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.