water level record
ಜನವರಿಯಲ್ಲೂ 124 ಅಡಿ ನೀರು: ಕೆಆರ್‌ಎಸ್ ಡ್ಯಾಂ ಹೊಸ ದಾಖಲೆ
ಮೈಸೂರು ಮತ್ತು ಬೆಂಗಳೂರಿಗರ ಜೀವನಾಡಿ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ ಜಲಾಶಯ ಹೊಸ ಇತಿಹಾಸ ದಾಖಲಿಸಿದೆ. ಜನವರಿಯಲ್ಲಿ ಕೂಡ ಜಲಾಶಯದಲ್ಲಿ ಗರಿಷ್ಠ 124 ಅಡಿ ನೀರು ಸಂಗ್ರಹವಿರುವುದು ವಿಶೇಷ. ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ನೀರು ಇದೆ. ಇದು ರೈತರು ಸೇರಿದಂತೆ ಜನರಿಗೆ ಸಂತೋಷ ತರುವ ವಿಚಾರ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ. ಕಾವೇರಿ ಕಣಿವೆಯಲ್ಲಿ