Menu
12

ವಿಜಯಪುರದಿಂದ ಕುಂಭಮೇಳಕ್ಕೆ ಹೊರಟಿದ್ದ ಇಬ್ಬರು ಅಪಘಾತಕ್ಕೆ ಬಲಿ

ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್ ಗೆ ಪ್ರಯಾಣಿಸುತ್ತಿದ್ದಾಗ ಗುಜರಾತ್‌ನ ಪೋರ್‌ಬಂದರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಜಯಪುರದ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗಿ (40) ಮೃತಪಟ್ಟವರು. ಚಡಚಣ ಪಟ್ಟಣದಿಂದ ಚಾಲಕ ಸೇರಿ 17 ಮಂದಿ ಮ್ಯಾಕ್ಸಿ ಕ್ಯಾಬ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಈ ವೇಳೆ ಮ್ಯಾಕ್ಸಿ ಕ್ಯಾಬ್ ಗುಜರಾತ್‌ನ ಪೋರ್‌ ಬಂದರ್ ಸಮೀಪ ನಿಂತಿದ್ದ

ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಸಚಿವ ಎಂಬಿ ಪಾಟೀಲ

ವಿಜಯಪುರ: ಇಲ್ಲಿನ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ಇದರಿಂದ 400 ಮಂದಿಗೆ ಉದ್ಯೋಗ ಸಿಗಲಿದೆ. ಜತೆಗೆ ಬೆಂಗಳೂರಿನಲ್ಲೂ ಕೆಎಸ್ಡಿಎಲ್ ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಬೃಹತ್ ಮತ್ತು