Menu

ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆ ಬಿಲ್ ಸಿದ್ಧ: 3 ವರ್ಷ ಜೈಲು, 1 ಲಕ್ಷ ದಂಡ!

ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಹಾಗೂ ಸಾಲಗಾರರ ಆತ್ಮಹತ್ಯೆ ಪ್ರಕರಣಗಳ ತಡೆಗೆ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕರಡು ವಿಧೇಯಕ ಸಿದ್ಧಪಡಿಸಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯ ಅಜೆಂಡಾದಲ್ಲಿ ಕಾನೂನು ಇಲಾಖೆಯಿಂದ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಮತ್ತು ಲೇವಾದೇವಿ ನಿಯಂತ್ರಣ 2025ರ ಕರಡು ಬಿಲ್ ಸೇರ್ಪಡೆಯಾಗಿದೆ. ಸಚಿವ