Menu

ತುಂಗಭದ್ರಾ ಕಲುಷಿತ: ನೀರು ಸೇವಿಸದಂತೆ ಗ್ರಾಮಗಳಲ್ಲಿ ಜಿಲ್ಲಾಡಳಿತ ಡಂಗೂರ

ಸರ್ಕಾರಿ ಇಲಾಖೆಗಳು ನೀಡಿರುವ ವರದಿಗಳ ಪ್ರಕಾರ ಆರು ಜಿಲ್ಲೆಯ ಜನರ ಪಾಲಿನ ಜೀವ ನದಿ ತುಂಗಭದ್ರಾ ನೀರು ಈಗ ಕುಡಿಯಲು ಯೋಗ್ಯ ಇಲ್ಲ. ನದಿ ತೀರದ ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಇಲಾಖೆಗಳ ವರದಿ ಬಳಿಕ ಗದಗ ಜಿಲ್ಲಾಡಳಿತ ತುಂಗಭದ್ರಾ ನದಿಯಿಂದ ನೇರವಾಗಿ ಗ್ರಾಮಗಳಿಗೆ ನೀರು ಸರಬರಾಜು ಮಾಡದಂತೆ ಸೂಚನೆ ನೀಡಿದೆ. ಜನ ಹಾಗೂ ಜಾನುವಾರುಗಳಿಗೆ ನೀರು ಸೇವನೆ ಮಾಡದಂತೆ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಡಂಗೂರ ಮೂಲಕ