Tombattu Lakshmi
ನಕ್ಸಲ್ ತೊಂಬಟ್ಟು ಲಕ್ಷ್ಮೀ ಉಡುಪಿ ಡಿಸಿ ಕಚೇರಿಯಲ್ಲಿ ಶರಣಾಗತಿ
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿದ್ದ ತೊಂಬಟ್ಟು ಲಕ್ಷ್ಮೀ ಶರಣಾಗಿದ್ದಾರೆ. ಶರಣಾಗತಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ತೊಂಬಟ್ಟು ಲಕ್ಷ್ಮೀ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ್ ಜೊತೆಗಿದ್ದು, ಶರಣಾಗತಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಭದ್ರತೆಯೊಂದಿಗೆ ಡಿಸಿ ಕಚೇರಿಗೆ ಲಕ್ಷ್ಮಿಯನ್ನು ಪೊಲೀಸರು ಕರೆದೊಯ್ದರು. ಶರಣಾದ ನಕ್ಸಲ್ ಜೊತೆ ಆಕೆಯ ಸಹೋದರ ಮತ್ತು ಬಂಧುಗಳು ಹಾಜರಿದ್ದರು. ಕುಂದಾಪುರ ತಾಲೂಕು