Menu

ನಂದಿನಿ ತುಪ್ಪವೇ ಬೇಕೆಂದ ತಿರುಪತಿ ತಿರುಮಲ ದೇವಸ್ಥಾನ

ತಿರುಮಲ ತಿರುಪತಿ ದೇವಸ್ಥಾನಂ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ. ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂಬ ಟಿಟಿಡಿ ಬೇಡಿಕೆಯಂತೆ ಕೆಎಂಎಫ್‌ ತಿರುಪತಿಗೆ ತುಪ್ಪವನ್ನು ಕಳುಹಿಸಿ ಕೊಟ್ಟಿದೆ. ಸೋಮವಾರ ತಿರುಪತಿಗೆ 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಭದ್ರತೆಯೊಂದಿಗೆ ಕಳುಹಿಸಿಕೊಟ್ಟಿದೆ. ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು, ಇನ್ನುಳಿದ ತುಪ್ಪವನ್ನು ಇತರ ಮಹಾ ಮಂಡಳಿಯಿಂದ ಕೆಎಂಎಫ್‌ ಕಳುಹಿಸಿ

Accident deaths: ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರ ಸಾರಿಗೆ ಬಸ್‌ ಅಪಘಾತ-ನಾಲ್ವರ ಸಾವು

ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿರುಪತಿಯಿಂದ ಬರುತ್ತಿದ್ದ ಆಂಧ್ರ ಸಾರಿಗೆ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಅಪಘಾತದಲ್ಲಿ

ಒಂದು ಕೋಟಿ ಬಾರಿ “ಗೋವಿಂದ” ಬರೆದರೆ ತಿರುಪತಿಯಲ್ಲಿ ಉಚಿತ ವಿಐಪಿ ದರ್ಶನ

25 ವರ್ಷದೊಳಗಿನ ಯುವಕರು ಒಂದು ಕೋಟಿ ಬಾರಿ “ಗೋವಿಂದ” ನಾಮ ಬರೆದರೆ, ಅವರು ಕುಟುಂಬ ಸದಸ್ಯರೊಂದಿಗೆ ತಿರುಮಲ ಶ್ರೀನಿವಾಸನ ಉಚಿತ ವಿಐಪಿ ದರ್ಶನ ಪಡೆಯಬಹುದಾಗಿದೆ. ಯುವಜನರಲ್ಲಿ ಆಧ್ಯಾತ್ಮಿಕತೆ ಬೆಳೆಸುವ ಉದ್ದೇಶದಿಂದ ಟಿಟಿಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಗೋವಿಂದ ಕೋಟಿ ಕಾರ್ಯಕ್ರಮದಲ್ಲಿ

ತಿರುಪತಿ ಬಳಿ ಅಪಘಾತ: ಬೆಂಗಳೂರಿನ ಐವರು ಸಾವು

ತಿರುಪತಿ:ವೇಗವಾಗಿ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ತಿರುಪತಿ ಜಿಲ್ಲೆಯ ಪಾಕಾಲ ಮಂಡಲಂ ತೋಟಪಲ್ಲಿ ಬಳಿಯ ಹೆದ್ದಾರಿಯಲ್ಲಿ ಸೋಮವಾರ ಅಪಘಾತ ನಡೆದಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಎರ್ಟಿಕಾ ಕಾರಿನಲ್ಲಿ ತಿರುಪತಿಯಿಂದ

ಮನೆ ಬಿಟ್ಟು ಬಂದ ಬಾಲಕಿಯನ್ನು ಮೆಜೆಸ್ಟಿಕ್‌ನಿಂದ ತಿರುಪತಿಗೆ ಕರೆದೊಯ್ದು ಅತ್ಯಾಚಾರ

ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಣ್ಣು ವ್ಯಾಪಾರಿಯೊಬ್ಬ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದು, ಆತನ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರು ಆಧರಿಸಿ

ತಿರುಪತಿ ಲಡ್ಡು ಕಲಬೆರಕೆ: ನಾಲ್ವರನ್ನು ಬಂಧಿಸಿದ ಸಿಬಿಐ

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉತ್ತರಾಖಂಡ್‌ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್, ಪೊಮಿಲ್

Tirupati ತಿರುಪತಿ ದೇವಸ್ಥಾನದಿಂದ 18 ಅನ್ಯಧರ್ಮಿ ಉದ್ಯೋಗಿಗಳ ತೆರವು

ತಿರುಪತಿ: ಹಿಂದುಯೇತರ ಧರ್ಮಾಚರಣೆ ಮಾಡುತ್ತಿದ್ದ 18 ಉದ್ಯೋಗಿಗಳನ್ನು ಕರ್ತವ್ಯದಿಂದ ತೆಗೆಯಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಕ್ರಮ ಕೈಗೊಂಡಿದೆ. ಅಧ್ಯಕ್ಷ ಬಿ.ಆರ್.ನಾಯ್ಡು ನೇತೃತ್ವದ ಟಿಟಿಡಿ ಮಂಡಳಿಯು ಈ ಹಿಂದೆ ಟಿಟಿಡಿಯಲ್ಲಿ ಹಿಂದೂ ಉದ್ಯೋಗಿಗಳು ಮಾತ್ರ ಕೆಲಸ ಮಾಡಬಹುದು ಎಂದು ಹೇಳಿತ್ತು. ಆದಾಗ್ಯೂ,

ತಿರುಮಲದಲ್ಲಿ ರಾಜ್ಯ ಭಕ್ತಾದಿಗಳಿಗೆ ಮೂರು ವಸತಿ ಸಂಕೀರ್ಣ

ಬೆಂಗಳೂರು:ರಾಜ್ಯ ಸರ್ಕಾರವು ತಿರುಪತಿಯ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುವ ರಾಜ್ಯದ ಯಾತ್ರಾರ್ಥಿಗಳಿಗೆ 200 ಕೋಟಿಗಳ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ತಿರುಪತಿಯಲ್ಲಿ ಲಡ್ಡು ಕೇಂದ್ರದಲ್ಲಿ ಅಗ್ನಿ ಆಕಸ್ಮಿಕ: ಸಿಬ್ಬಂದಿಯಿಂದ ತಪ್ಪಿದ ಭಾರೀ ಅನಾಹುತ!

ಕೆಲವು ದಿನಗಳ ಹಿಂದೆ ಕಾಲ್ತುಳಿತ ದುರಂತದ ಮಾಸುವ ಮುನ್ನವೇ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ಕೂದಲೆಳೆ ಅಂತರದಿಂದ ತಪ್ಪಿದೆ. ಸೋಮವಾರ ಬೆಳಿಗ್ಗೆ ತಿರುಪತಿಯ 47ನೇ ಲಡ್ಡು ಕೌಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ

ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲಿಂದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆ

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ  ವೈಕುಂಠ ಏಕಾದಶಿ ಪ್ರಯುಕ್ತ  ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್‌ ಪಡೆಯಲು ಭಕ್ತರು ನೂಕು ನುಗ್ಗಲು ಉಂಟು ಮಾಡಿದ್ದರಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ