suprme court
ಲೋಕಪಾಲರ ಕಾರ್ಯವ್ಯಪ್ತಿ: ಜುಲೈನಲ್ಲಿ ಸುಪ್ರೀಂ ಪರಾಮರ್ಶೆ
ನವದೆಹಲಿ: ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರಚನೆಯಾಗಿರುವ ಲೋಕಪಾಲದ ಕಾರ್ಯವ್ಯಾಪ್ತಿ ಕುರಿತು ಸಲ್ಲಿಕೆಯಾದ ದೂರುಗಳ ಕುರಿತು ಜುಲೈನಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಶೇಷ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು. ಪೀಠದಲ್ಲಿ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಇದ್ದರು. ‘ಇದು ಔಚಿತ್ಯದ ವಿಷಯವಾಗಿರುವುದರಿಂದ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ನಿರ್ಧರಿಸಬೇಕು’ ಎಂದು ನ್ಯಾ. ಓಕಾ ಅಭಿಪ್ರಾಯಪಟ್ಟರು. ‘ಹೈಕೋರ್ಟ್ನ ಇಬ್ಬರು


