Sub Registrar arrest
ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿ ನಿವೇಶನ ಮಾರಾಟ: ಉಪ ನೋಂದಣಾಧಿಕಾರಿ ರೂಪಾ, ಏಜೆಂಟ್ ಅರೆಸ್ಟ್
ಬೆಂಗಳೂರಿನಲ್ಲಿ 12 ವಸತಿ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಲೀಕರಿಗೆ ಹಲವು ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರು ಸಬ್-ರಿಜಿಸ್ಟ್ರಾರ್ ರೂಪಾ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ ಮಾಲೀಕ ನವೀನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ (40) ಮತ್ತು ಚಂದಾಪುರ ನಿವಾಸಿಯಾದ ನವಯುಗ ಪ್ರಾಪರ್ಟೀಸ್ ಕಂಪನಿಯ ಏಜೆಂಟ್ ನವೀನ್ ಕುಮಾರ್ ಈ ವಂಚನೆ ಕೃತ್ಯದ ರೂವಾರಿಗಳು. ಪರಪ್ಪನ ಅಗ್ರಹಾರ ನಿವಾಸಿ ದೂರುದಾರರನ್ನು ಸಬ್-ರಿಜಿಸ್ಟ್ರಾರ್


