Menu

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಕುಸಿತ: ಐಟಿ-ಬಿಟಿ ಸಚಿವರ ಕಾರ್ಯವೈಖರಿ ಎಂದ ಆರ್‌ ಅಶೋಕ

ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಾಸಕ್ತಿ, ನಿಷ್ಕ್ರಿಯತೆ ಪರಿಣಾಮವಾಗಿ ಇಂದು ನಮ್ಮ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಭಾರಿ ಕುಸಿತ ಕಂಡಿದೆ. ನವೋದ್ಯಮಗಳ ರಾಜಧಾನಿ ಎಂದು ಖ್ಯಾತಿ ಪಡೆದಿದ್ದ ಕರ್ನಾಟಕ ಮತ್ತು ಬೆಂಗಳೂರು ಇಂದು ಅನ್ಯರಾಜ್ಯಗಳ ಮುಂದೆ ತಲೆತಗ್ಗಿಸುವಂತಾಗಿದೆ. ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ತಮಗೆ ಸಂಬಂಧಪಡದ