Menu
12

ವಿಧಾನಮಂಡಲ ಅಧಿವೇಶನದಿಂದ ಅರ್ಧಕ್ಕೆ ಹೊರಟ ರಾಜ್ಯಪಾಲ ರವಿ!

ಚೆನ್ನೈ: ರಾಜ್ಯ ಸರಕಾರದ ಜೊತೆ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಸೃಷ್ಟಿಸಿಕೊಳ್ಳುತ್ತಲೇ ಬಂದಿರುವ ತಮಿಳುನಾಡು ರಾಜ್ಯಪಾಲ ರವಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡದೇ ಅರ್ಧಕ್ಕೆ ಎದ್ದು ಹೋದ ಘಟನೆ ಪುನರಾವರ್ತಿಸಿದೆ. ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸದ ಕಾರಣ ಶಿಷ್ಟಾಚಾರದ ಉಲ್ಲಂಘನೆಯನ್ನು ಉಲ್ಲೇಖಿಸಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಸೋಮವಾರ ಬೆಳಿಗ್ಗೆ ರಾಜ್ಯ ವಿಧಾನಸಭೆಯಿಂದ ಹಠಾತ್ತನೆ ಹೊರನಡೆದರು. ಈ ಘಟನೆಯು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಬಿರುಕನ್ನು ಆಳಗೊಳಿಸಿದೆ, ಸಾಂವಿಧಾನಿಕ