Special pooja
ಬೆಂಗಳೂರಿನ ದೇಗುಲಗಳಲ್ಲಿ ಸೇನೆಗಾಗಿ ವಿಶೇಷ ಪೂಜೆ
ಭಾರತೀಯ ವಾಯುಪಡೆಯು ಆಪರೇಷನ್ ಸಿಂಧೂರ ಮೂಲಕ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಇನ್ನು ಮುಂದಿನ ದಿನಗಳಲ್ಲೂ ಸೇನೆಗೆ ಒಳಿತಾಗಲಿ ಎಂದು ಬೆಂಗಳೂರಿನ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಗವಿಗಂಗಾಧರ ದೇಗುಲದಲ್ಲಿ ದೇಶವನ್ನು ರಕ್ಷಿಸುವ ಸೇನೆಗೆ ಬಲ ನೀಡು ತಾಯಿ ಎಂದು ದುರ್ಗಾ ಹೋಮ ಮಾಡಲಾಗಿದ್ದು, ದುರ್ಗಾ ಹೋಮದ ಜೊತೆಗೆ ವಿಶೇಷ ಪೂಜೆ ಕೂಡ ನಡೆಸಲಾಗಿದೆ. ಶತ್ರುಗಳ ಸಂಹಾರದ ಜೊತೆಗೆ ಸೈನಿಕರ ಶಕ್ತಿಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.


