Menu

ಲೈಂಗಿಕ ದೌರ್ಜನ್ಯ, ಜಾತಿನಿಂದನೆ: ಸಿರಿಗೆರೆ ಗ್ರಾ.ಪಂ ಸದಸ್ಯ ಅರೆಸ್ಟ್‌

ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ಸದಸ್ಯನನ್ನು ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ದೂರಿನ ಅಡಿ ಪೊಲೀಸರು ಬಂಧಿಸಿದ್ದಾರೆ. ಸಿರಿಗೆರೆ ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಬಂಧಿತ ಆರೋಪಿ. ಆರೋಪಿ ಜಾತಿನಿಂದನೆ ಮಾಡುವುದಲ್ಲದೆ ಗ್ರಾ.ಪಂ ಅಧ್ಯಕ್ಷೆ ಹಾಗೂ ಪಿಡಿಒಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪಂಚಾಯತಿಯ ಕ್ಲರ್ಕ್ ಜಯರಾಮ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಯರಾಮ್ ಅವರು ನೀಡಿದ ದೂರು ಪರಿಗಣಿಸಿ ಭರಮಸಾಗರ ಪೊಲೀಸರು ಆರೋಪಿ ದೇವರಾಜ್‌ನನ್ನು ಬಂಧಿಸಿದ್ದಾರೆ.