siddaramaih
ಕರ್ನಾಟಕ ವಿರೋಧಿ ಬಜೆಟ್: ಸಿಎಂ ಸಿದ್ದರಾಮಯ್ಯ ಅಸಮಾಧಾನ
ದೂರದೃಷ್ಟಿ ರಹಿತ, ನಿರಾಶಾದಾಯಕ ಬಜೆಟ್ ಆಗಿದ್ದು, ಇದು ಕರ್ನಾಟಕ ವಿರೋಧಿ ಬಜೆಟ್ ಆಗಿದೆ. ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಲ್ಲಿಸಿದ ಬೇಡಿಕೆ ಪಟ್ಟಿಯಲ್ಲಿ ಒಂದೂ ಈಡೇರಿಸಿಲ್ಲ. ಕೇಂದ್ರಕ್ಕೆ ತೆರಿಗೆ ಅತೀ ಹೆಚ್ಚು ತೆರಿಗೆಪಾವತಿಸುವ ರಾಜ್ಯವಾದ ಕರ್ನಾಟಕಕ್ಕೆ ಒಂದೂ ಯೋಜನೆ ಕೊಟ್ಟಿಲ್ಲ ಎಂದರು. ಮೇಕೆದಾಟು, ತುಂಗಭದ್ರ, ಮಹದಾಯಿ, ಕೃಷ್ಣ ಯೋಜನೆ ಸೇರಿದಂತೆ ಯಾವುದೇ ಯೋಜನೆ ಪರಿಗಣಿಸಿಲ್ಲ.