Rajvveer mother death
ಕೇದಾರನಾಥ ಹೆಲಿಕಾಪ್ಟರ್ ಪತನ: ಕೊರಗಿನಲ್ಲಿದ್ದ ಮೃತ ಪೈಲಟ್ ತಾಯಿಯ ಸಾವು
ಕೇದಾರನಾಥದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಪೈಲಟ್ ರಾಜ್‌ವೀರ್ ಸಿಂಗ್ ಚೌಹಾಣ್ ಅವರ ತಾಯಿ ಅಸು ನೀಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ದುಃಖದಿಂದ ಕುಸಿದು ಹೋಗಿದ್ದ ತಾಯಿ 13 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಮಗನ ಸಾವಿನ ಆಘಾತದಿಂದ ರಾಜ್‌ವೀರ್ ತಾಯಿ ಲಕ್ಷ್ಮಿ ಚೌಹಾಣ್ ಚೇತರಿಸಿಕೊಳ್ಳದೆ ಆರೋಗ್ಯ ಹದಗೆಡುತ್ತಿತ್ತು, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಜೂನ್ 15