Oil warehouse
ನೆಲಮಂಗಲದಲ್ಲಿ ಆಯಿಲ್ ಗೋದಾಮು ಬೆಂಕಿಗಾಹುತಿ
ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಶಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಈ ದುರಂತ ನಡೆದಿದೆ. ನೆಲಮಂಗಲ, ಪೀಣ್ಯ ಯಶವಂತಪುರ ಭಾಗದ 8 ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಕ್ಷಣಕ್ಷಣಕ್ಕೂ ಬೆಂಕಿ ಇನ್ನಷ್ಟು ವ್ಯಾಪಿಸುತ್ತಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಗೋದಾಮು ಹಾಗೂ ಮನೆಗೆ ಬೆಂಕಿ ತಗುಲುವ ಆತಂಕ


