Nirmalananda Swamy
ಸಿಎಂ ಬದಲಾವಣೆ ಚರ್ಚೆ ತೀವ್ರ: ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತೀವ್ರ ಕಾವೇರಿದ್ದು, ಬಿರುಸಿನ ಮಾತು, ಚಟುವಟಿಕೆಗಳು ಗರಿಗೆದರಿವೆ, ಈ ಮಧ್ಯೆ ಚುಂಚನಗಿರಿ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸಿರುವುದು ಕುತೂಹಲ ಕೆರಳಿಸಿದೆ. ಬೆಂಗಳೂರಿನಿಂದ ಇಂಡಿಗೊ ವಿಮಾನದ ಮೂಲಕ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸುತ್ತಿದ್ದು, ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ಮಠದ ಮೂಲಗಳು ತಿಳಿಸಿವೆ. ನಿನ್ನೆಯಷ್ಟೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡುವ ವಿಚಾರವಾಗಿ ಮಾತನಾಡಿದ್ದ ಸ್ವಾಮೀಜಿ ಇಂದು ದೆಹಲಿಗೆ ಪ್ರಯಾಣಿಸಿರುವುದು ಹಲವು ಪ್ರಶ್ನೆಗಳನ್ನು


