Menu

ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಬಿ-ಖಾತಾ ಅಭಿಯಾನ

ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಇತರ ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ರಿಂದ 32 ಲಕ್ಷ ನಿವೇಶನ- ಅಸ್ತಿಗಳಿಗೆ ಯಾವುದೇ ಇ-ದಾಖಲೆ ಇಲ್ಲ. ಈ ಎಲ್ಲಾ ಆಸ್ತಿಗಳಿಗೂ ಒಂದು ಬಾರಿಯ ಪರಿಹಾರವಾಗಿ ಎಲೆಕ್ಟ್ರಾನಿಕ್ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆಗೆ ಸಭೆ ನಡೆಸಿದ ಅವರು, ಫೆ.10ರ ಒಳಗಾಗಿ ಈ ಬಗ್ಗೆ ಸುತ್ತೋಲೆ ಹೊರಡಿಸಲಿದ್ದು, ಮೂರು ತಿಂಗಳಲ್ಲಿ ಖಾತಾ ವಿತರಣೆ ಮಾಡಬೇಕು.