Menu

ಪ್ರೀತಿಯನ್ನೇ ಉಸಿರಾಗಿಸಿಕೊಂಡ ಕವಿತೆ

ನೋಡು ನೋಡುತ್ತಿದ್ದಂತೆ ನೋವು ಸಖನಾಗಿಬಿಟ್ಟಿದೆ ಸುಖವು ಬಂದರೂ ಅಪ್ಪಿಕೊಳ್ಳದಂತೆ… ಬದುಕಿಡೀ ದುಃಖದ ಸಾಂಗತ್ಯದಲ್ಲಿಯೇ ಇದ್ದ ಜೀವಕ್ಕೆ ಯಾತನೆಯೇ ಆಪ್ತಸಖನೆನಿಸುತ್ತದೆ. ಸುಖ ಬಳಿ ಬಂದು ನಿಂತರೂ ನಗುತ್ತಲೇ ಅದನ್ನು ತಿರಸ್ಕರಿಸುವಷ್ಟು ನೋವಿಗೆ ಶರಣಾದ ಜೀವದ ಹೃದಯದ ಸಾಲುಗಳಿವು. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು ಆವಲಹಳ್ಳಿಯವರಾದ ಲೋಕೇಶ್ ಮನ್ವಿತ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಚಿತ್ರಕಲೆ, ಕವಿತೆ ರಚನೆ ಇವರ ಇಷ್ಟದ ಹವ್ಯಾಸ. ಕವಿವಾಣಿ ಮಾಸಪತ್ರಿಕೆ, ಅವಧಿ ಬ್ಲಾಗ್‌ನಲ್ಲಿ ಇವರ