Menu

ಕಾಲ್‌, ಮೆಸೇಜ್‌ಗೆ ಸ್ಪಂದಿಸದ ಪ್ರೇಯಸಿ: ಮಂಗಳೂರಿನ ಯುವಕ ಒಮನ್‌ನಲ್ಲಿ ಆತ್ಮಹತ್ಯೆ

ಒಂದು ತಿಂಗಳಿಂದ ಪ್ರೇಯಸಿ ಮೆಸೇಜ್ ಹಾಗೂ ಕರೆಗೆ ಪ್ರತಿಕ್ರಿಯಿಸುತ್ತಿಲ್ಲವೆಂದು ನೊಂದು ಮಂಗಳೂರಿನ ಸೋಮೇಶ್ವರದ ಯುವಕನೊಬ್ಬ ಒಮನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ಪೂಜಾರಿ (32) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಒಮನ್‍ನ ಲಿಫ್ಟ್ ಕಂಪನಿಯಲ್ಲಿ ಪುನೀತ್‌ ಕೆಲಸ ಮಾಡಿಕೊಂಡಿದ್ದ. ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವದ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು, ಮರಳಿ ಒಮನ್‍ಗೆ ತೆರಳಿದ್ದ. ಇತ್ತೀಚೆಗೆ ಪುನೀತ್‍ನ ಕರೆ, ಸಂದೇಶಗಳಿಗೆ ಪ್ರೀತಿಸುತ್ತಿದ್ದ

ತೊರೆದ ಪ್ರೇಯಸಿ: ಬೆಂಗಳೂರಿನಲ್ಲಿ ನೊಂದ ಬಾಡಿಬಿಲ್ಡರ್‌ ಸುಸೈಡ್‌

ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಬೇರೆಯವನನ್ನು ಮದುವೆಯಾಗಲು ಒಪ್ಪಿದ್ದರಿಂದ ನೊಂದುಕೊಂಡ ಬಾಡಿಬಿಲ್ಡರ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಡೆತ್‌ ನೋಟ್‌ನಲ್ಲಿ ಪ್ರೇಯಸಿ ಮತ್ತು ಆಕೆಯ ತಾಯಿ ಹೆಸರನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮನೆಯಲ್ಲಿ

ಪ್ರೀತಿ ಹೆಸರಲ್ಲಿ ಸೆಕ್ಸ್‌, ಮದುವೆ ನಿರಾಕರಣೆ: ಡೆತ್‌ನೋಟ್‌ ಬರೆದಿಟ್ಟು ಯುವತಿ ಸುಸೈಡ್‌ ಯತ್ನ

ಯುವಕನೊಬ್ಬ ಪ್ರೀತಿ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ವಿವಾಹವಾಗಲು ನಿರಾಕರಿಸಿದ್ದರಿಂದ ನೊಂದ ಯುವತಿ ಡೆತ್ ನೋಟ್ ಬರೆದು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರ ಮಹಿಳಾ ಪೊಲೀಸ್ ಠಾಣೆ ಸಮೀಪ ಘಟನೆ ನಡೆದ ಕಾರಣ ಸಮಯಕ್ಕೆ

ಬೇರೆ ಯುವತಿ ಜೊತೆ ಮದುವೆ: ಮಂಟಪಕ್ಕೆ ಬಂದು ತನ್ನನ್ನೇ ಮದುವೆಯಾಗುವಂತೆ ಹಠ ಹಿಡಿದ ಪ್ರೇಯಸಿ

ಚಿಕ್ಕಮಗಳೂರಿನ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ಯುವಕ ಮದುವೆಯಾಗುತ್ತಿದ್ದಾಗ ಮಂಟಪಕ್ಕೆ ಬಂದ ಆತನ ಪ್ರೇಯಸಿ, ನಾನು ಇವನನ್ನೇ ಮದುವೆಯಾಗಬೇಕು.ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ, ವಿಷ ಕುಡಿದು ಸಾಯುತ್ತೇನೆ ಎಂದು ಗಲಾಟೆ ಮಾಡಿದ್ದಾಳೆ. ಈತ 10 ವರ್ಷ ಪ್ರೀತಿಸಿ ಮೋಸ ಮಾಡಿದ್ದಾನೆಂದು ಯುವತಿ

ಮದುವೆಗೆ ಒಪ್ಪದ ಪ್ರಿಯಕರ: ರಾಮನಗರದಲ್ಲಿ ಯುವತಿ ಆತ್ಮಹತ್ಯೆ

ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಪ್ರೀತಿಸಿದ ಯುವಕ ಮದುವೆಯಾಗಲು ಒಪ್ಪಲಿಲ್ಲವೆಂದು ನೊಂದ ಯುವತಿ ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿ (22) ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪ್ರೀತಿಸುತ್ತಿದ್ದರು. ಯುವಕ ಮದುವೆಯಾಗಲು

ಮದುವೆಯಾಗುವುದಾಗಿ ನಂಬಿಸಿ ಸೆಕ್ಸ್‌, ಮೋಸ: ಯುವಕನ ವಿರುದ್ಧ ಯುವತಿ ದೂರು

ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿದ್ದಾನೆಂದು ಯುವತಿ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮೊಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಶಾಕ್ ಯುವತಿಗೆ ಮೋಸ ಮಾಡಿ ಮತ್ತೊಬ್ಬಳು ಯುವತಿ ಜೊತೆ

ರಾಜಾಜಿನಗರದಲ್ಲಿ ಪ್ರೀತಿಸಿದಾತ ಮದುವೆ ಮುಂದೂಡುತ್ತಿದ್ದನೆಂದು ನೊಂದ ಯುವತಿ ಆತ್ಮಹತ್ಯೆ

ರಾಜಾಜಿನಗರದ ಗಾಯತ್ರಿ ನಗರದಲ್ಲಿ ಪ್ರೀತಿಸುತ್ತಿದ್ದ ಯುವಕ ಮದುವೆಯನ್ನು ಮುಂದೂಡುತ್ತ ಬರುತ್ತಿದ್ದಾನೆಂದು ಜಗಳವಾಡಿದ ಯುವತಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಲತಾ(25) ನೇಣುಬಿಗಿದುಕೊಂಡ ಯುವತಿ. ಆಕೆ ಮಂಡ್ಯ ಜಿಲ್ಲೆಯ ರಂಜಿತ್ ಎಂಬ ಯುವಕನನ್ನು ಐದು