Menu

ಸೆಲ್ಫಿ ಗೀಳಿಗೆ ಅಂಜನಾದ್ರಿ ಬೆಟ್ಟದ ಕಂದಕಕ್ಕೆ ಬಿದ್ದ ಯುವತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಟ್ಟದ ಹಿಂಬಾಗದಲ್ಲಿರುವ ಬಂಡೆಗಲ್ಲಿನ ಮೇಲೆ ನಿಂತು ಕೆಲವು ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆಂಜನೇಯನ ದರ್ಶನ ಪಡೆಯುಲು ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದಿಂದ ಇಳಿಯುವ ಮೊದಲೇ ಬೆಟ್ಟದ ಮೇಲಿರುವ ಬಂಡೆಗಲ್ಲಿನ ಮೇಲಿಂದ 30 ರಿಂದ 40 ಅಡಿ ಕೆಳಗೆ ಬಿದ್ದಿದ್ದಾಳೆ. ಕೆಳಕ್ಕೆ ಬೀಳುತ್ತಿದ್ದಂತೆ

ಕೊಪ್ಪಳ: ಬಾಣಂತಿಗೆ ಕುತ್ತು ತಂದೊಡ್ಡಿದ ಅಧಿಕ ರಕ್ತದೊತ್ತಡ

ಕೊಪ್ಪಳ: ಬಾಣಂತಿಯರ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದಕ್ಕೆ ನಾನಾ ಕಾರಣಗಳಿದ್ದರೂ ಆಗುತ್ತಿರುವ ಜೀವಹಾನಿ ಅಸಹನೀಯ. ಇಂಥ ಮತ್ತೊಂದು ಘಟನೆ ಕೊಪ್ಪಳದಲ್ಲಿ ಮಂಗಳವಾರ ಬೆಳಗಿನ ವೇಳೆ ನಡೆದಿದೆ. ಗುರುವಾರವಷ್ಟೇ ಇಲ್ಲಿನ 100 ಹಾಸಿಗೆಗಳ ತಾಯಿ-ಶಿಶು ಆಸ್ಪತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ