koppal
ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವಕ್ಕೆ ಮಳೆಯಲ್ಲೂ ಜನ ಸಾಗರ
ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಮಹಾರಥೋತ್ಸವವು ಅಪಾರ ಜನ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 24ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಹಾರಥೋತ್ಸವವು ಬುಧವಾರ ಸಾಯಂಕಾಲ 5-30 ಗಂಟೆಗೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಮಳೆಯ ನಡುವೆಯೂ ಮಹಾರಥೋತ್ಸವಕ್ಕೆ ಭಕ್ತರು ಸಾಗರದಂತೆ ಹರಿದು ಬಂದಿರುವುದು ವಿಶೇಷವಾಗಿತ್ತು.
ಕೊಪ್ಪಳದಲ್ಲಿ ಇಸ್ರೇಲ್ ಪ್ರವಾಸಿ, ಸ್ಥಳೀಯ ಮಹಿಳೆ ಮೇಲೆ ಗ್ಯಾಂಗ್‌ರೇಪ್
ಕೊಪ್ಪಳದಲ್ಲಿ ಇಸ್ರೇಲ್ ದೇಶದ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲೀಕ ಮಹಿಳೆಯ ಮೇಲೆ ಕೆಲವು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸಂತ್ರಸ್ತೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಗಂಗಾವತಿ ತಾಲೂಕಿನ
ಫೈರಿಂಗ್ ತರಬೇತಿ ವೇಳೆ ಮಹಿಳೆಗೆ ಗುಂಡೇಟು
ಕೊಪ್ಪಳ: ಡಿ.ಎ.ಆರ್.ಪೊಲೀಸರ ಫೈರಿಂಗ್ ತರಬೇತಿ ವೇಳೆ ಗುಂಡು ಮಹಿಳೆಯೊಬ್ಬರಿಗೆ ತಗುಲಿದ ಘಟನೆ ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಬಳಿ ಘಟನೆ ಜಬ್ಬಲಗುಡ್ಡದ ಕುಮ್ಮಟದುರ್ಗ ಗುಡ್ಡದ ಪೊಲೀಸ್ ತರಬೇತಿ ಸ್ಥಳದಲ್ಲಿ ಮಂಗಳವಾರ ನಡೆದಿದೆ. ಗುಂಡು ಬಿದ್ದ ಮಹಿಳೆಯನ್ನು ರೇಣುಕಮ್ಮ ಜಗದೀಶ್ ಕಬ್ಬೇರ ಎಂದು ಗುರುತಿಸಲಾಗಿದೆ.
ಎಂಎಸ್ಪಿಎಲ್ ಫ್ಯಾಕ್ಟರಿ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್ ಗೆ ಅಭೂತಪೂರ್ವ ಜನ ಬೆಂಬಲ
ಕೊಪ್ಪಳ: ಸರಕಾರದಲ್ಲಿ ಅತ್ಯಂತ ಪ್ರಭಾವಿಗಳಾದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ನೀವ ಏನ್ ಮಾಡ್ತಿರೊ ಗೊತ್ತಿಲ್ಲ, ಆದೇಶ ತಗೊಂಡ ಕೊಪ್ಪಳಕ್ಕ ಬರ್ರಿ” ಎಂದು ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಶ್ರೀ
ಕುಮಾರಸ್ವಾಮಿ ಕುಟುಂಬದ ಅತಿಕ್ರಮಿತ ಭೂಮಿ ಮರಳಿಸಲು ಕೋರ್ಟ್ ಮೊರೆ: ಎಸ್.ಆರ್. ಹೀರೇಮಠ
ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತನಾಗನಹಳ್ಳಿಯಲ್ಲಿ 71.39 ಎಕರೆ ಗೋಮಾಳ ಜಮೀನನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಸಾವಿತ್ರಮ್ಮ, ಮಂಜುನಾಥ, ಡಿ.ಸಿ.ತಮ್ಮಣ್ಣ ಹಾಗೂ ಕುಟುಂಬದವರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಹೇಳಿದರು ನಗರದ
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಮಹಾಸಂಪನ್ನ: 25 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ದಾಸೋಹ
ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ ಕೊಪ್ಪಳದ ಗವಿಮಠದ ಜಾತ್ರೆಗೆ ವಿದ್ಯುಕ್ತವಾಗಿ ಮಹಾ ಸಂಪನ್ನಗೊಂಡಿದೆ. 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದಾಸೋಹದಲ್ಲಿ ಊಟ ಮಾಡಿದ್ದಾರೆ. ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ವೈಭವದಿಂದ ನಡೆದಿತ್ತು. ಅಂದು ಐದು ಲಕ್ಷ ಜನ ಭಾಗವಹಿಸಿದ್ದರು.
ಕೊಪ್ಪಳದಲ್ಲಿ ಅನಿಲ ಸೋರಿಕೆಗೆ ಕಾರ್ಮಿಕ ಬಲಿ , ಹಲವರು ಅಸ್ವಸ್ಥ
ಕೊಪ್ಪಳ ತಾಲೂಕಿನ ಅಲ್ಲಾನಗರದಲ್ಲಿ ಸ್ಟೀಲ್ ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆ ಉಂಟಾಗಿ ಕಾರ್ಖಾನೆಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಎಂಟಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಟ್ಯಾಂಕ್ ಸೋರಿಕೆ ಉಂಟಾಗಿ ಕಾರ್ಮಿಕ ಮಾರುತಿ (24) ಉಸಿರುಗಟ್ಟಿ ಅಸು
ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಕಲ್ಲಿನಲ್ಲಿ ಅರಳಿದ ಶಿಲ್ಪಕಲೆಯ ಅನಾವರಣ `ಲಕ್ಕುಂಡಿ’!
ನವದೆಹಲಿ: ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ರಾಜಧಾನಿಯ ಕರ್ತವ್ಯಪಥದಲ್ಲಿ (ರಾಜ್‌ಪಥ್) ಇದೇ ಜ. 26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ.
ನಾಡಿನ ಅಭಿವೃದ್ಧಿಯಲ್ಲಿ ಸಂಸ್ಕೃತಿ-ಸಾಹಿತ್ಯ ಕಣ್ಣುಗಳಿದ್ದಂತೆ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ನಾಡಿನ ಅಭಿವೃದ್ಧಿ ಆಗಬೇಕಂದರೆ ಸಂಸ್ಕೃತಿ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇವು ಚನ್ನಾಗಿದ್ದರೆ ನಾಡನ್ನು ನೋಡುವ ದೃಷ್ಟಿ ಚನ್ನಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು. ನಗರದಲ್ಲಿ ಬುಧವಾರ ಕರ್ನಾಟಕ
ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಗವಿಶ್ರೀಗಳು
ಕೊಪ್ಪಳ: ಗವಿಮಠದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಶ್ರೀಮಠದ ಗವಿಶ್ರೀಗಳು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಶುಕ್ರವಾರ ರಾತ್ರಿ ಕೈಲಾಸಮಂಟಪದ ವೇದಿಕೆಯಲ್ಲಿ ನಡೆಯಿತು. ಕೊಪ್ಪಳದ ನೂತನ ರೈಲು ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಗವಿಸಿದ್ಧೇಶ್ವರ ಹೆಸರಿನ ಜೊತೆ ಬೇರೆ