Menu

ಏಪ್ರಿಲ್‌ವರೆಗೆ ಕೊಪ್ಪಳ ನಗರಸಭೆಯಲ್ಲಿ ಹಣ ಇಲ್ಲ, ಖಜಾನೆ ಖಾಲಿ: ಪೌರಾಯುಕ್ತ

2026ರ ಏಪ್ರಿಲ್‌ವರೆಗೆ ಕೊಪ್ಪಳ ನಗರಸಭೆಯಲ್ಲಿ ಹಣ ಇಲ್ಲ, ಖಜಾನೆ ಖಾಲಿಯಾಗಿದೆ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ  ಪೌರಾಯುಕ್ತ ವೆಂಕಟೇಶ ನಾಗನೂರು  ಹೇಳಿದ್ದಾರೆ.  ಕೊಪ್ಪಳ ನಗರಸಭೆಯ 31 ಸದಸ್ಯರಿಗೆ ಕಳೆದ 10 ತಿಂಗಳಿನಿಂದ ಗೌರವಧನ ಬಂದಿಲ್ಲ. ಖಜಾನೆಯಲ್ಲಿ ಹಣವಿಲ್ಲ ಎಂದು  ಮಾಹಿತಿ ನೀಡಿದರು. ನಗರಸಭೆ ಸಾಮಾನ್ಯ ಸಭೆಯಲ್ಲಿ  ಅಧ್ಯಕ್ಷರಾದಿಯಾಗಿ ಸದಸ್ಯರೆಲ್ಲ ಅಧಿಕಾರಿಗಳ ಅಂಧಾ ದರ್ಬಾರ್‌ ವಿರುದ್ಧ ಮುಗಿಬಿದ್ದರು. ಕಳೆದೊಂದು ವರ್ಷದಿಂದ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರವನ್ನೇ ನಿರ್ವಹಿಸದಿರುವುದು ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು.