Kempamma Temple
ತುಮಕೂರು ಕೆಂಪಮ್ಮ ದೇಗುಲ ಬಳಿ ವಾಮಾಚಾರ, ಬಾಗಿಲಿಗೆ ತಗುಲಿದ ಬೆಂಕಿ
ತುಮಕೂರಿನ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಇರುವ ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಎದುರು ದುಷ್ಕರ್ಮಿಗಳು ವಾಮಾಚಾರ ಎಸಗಿರುವುದು ಪತ್ತೆಯಾಗಿದೆ. ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿಯು ದೇಗುಲದ ಬಾಗಿಲನ್ನು ಸಂಪೂರ್ಣ ಆವರಿಸಿ ಬಾಗಿಲು ಸುಟ್ಟು ಕರಕಲಾಗಿದೆ. ಕೆಂಪಮ್ಮ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ಯಾರೂ ಇಲ್ಲದ್ದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದಾರೆ. ಬುಧವಾರ( ಇಂದು) ಬೆಳಗ್ಗೆ ಪೂಜಾ


