Karnataka tourism
ದಕ್ಷಿಣ ಭಾರತದ ಹೆಮ್ಮೆ ‘ಕಾವೇರಿ ಆರತಿ’: ಡಿಕೆ ಶಿವಕುಮಾರ್ ದೂರದೃಷ್ಟಿ, ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಸಕ್ರಿಯ ಮುಂದಾಳತ್ವದ ಫಲವಾಗಿ, ಇದೇ ಸೆಪ್ಟೆಂಬರ್ 26 ರಿಂದ ಕೃಷ್ಣರಾಜ ಸಾಗರ (KRS) ಜಲಾಶಯದ ಬಳಿ ʻಕಾವೇರಿ ಆರತಿ’ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಭಾರತದ ಪ್ರತಿಯೊಬ್ಬ ಪ್ರವಾಸಿ ಮತ್ತು ಅಧ್ಯಾತ್ಮಿಕ ಆಕಾಂಕ್ಷಿಯ ಪಾಲಿಗೆ ವಾರಾಣಸಿಯ ಗಂಗಾರತಿ ಒಂದು ಮರೆಯಲಾಗದ ದೃಶ್ಯ. ನಾನೂ ಸಹ ಕಳೆದ ಬಾರಿ ಕಾಶಿಗೆ ಭೇಟಿ ನೀಡಿದ್ದಾಗ, ಸೂರ್ಯಾಸ್ತದ ಸಮಯದಲ್ಲಿ ಘಾಟುಗಳಲ್ಲಿ ರಥದ ಮಾದರಿಯ ಆರತಿಯನ್ನು


