Menu

ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ರಾಜ್ಯದ ಆರು ಸಾಧಕರು

ಕೇಂದ್ರ ಸರ್ಕಾರ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಘೋಷಿಣೆ ಮಾಡಿದ್ದು, ಕರ್ನಾಟಕದ ವಿವಿಧ ಕ್ಷೇತ್ರಗಳ ಒಟ್ಟು 9 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಬ್ಬರಿಗೆ ಪದ್ಮ ವಿಭೂಷಣ, ಇಬ್ಬರಿಗೆ ಪದ್ಮ ಭೂಷಣ, ಆರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ರಾಜ್ಯದಿಂದ ಕಲಾ ವಿಭಾಗದಲ್ಲಿ ಸಾಧನೆಗಾಗಿ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಅರಕಲಗೂಡು ಸೂರ್ಯಪ್ರಕಾಶ್​ ಮತ್ತು ಕಲಾ ವಿಭಾಗದಲ್ಲಿ ಸಾಧನೆಗಾಗಿ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.