kannada news
2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ: ಸತೀಶ್ ಜಾರಕಿಹೊಳಿ
ಜನರು ಅಭಿಮಾನದಿಂದ ಮುಂದಿನ ಸಿಎಂ ಅಂತ ಘೋಷಣೆ ಕೂಗ್ತಾರೆ, ಆದರೆ ಈ ಅವಧಿಗೆ ಅಲ್ಲ, ಮುಂದಿನ 2028ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ ಅವರ ಅಭಿಮಾನಕ್ಕಾಗಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಘೋಷಣೆ ಕೂಗುತ್ತಾರೆ. ಆದರೆ 2028ಕ್ಕೆ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೇನೆ. ಈಗ ಸಿಎಂ ಯಾರಾಗುತ್ತಾರೆ ಆಗಲಿ, ಮುಂದಿನ
ಬಿಗ್ ಬಾಸ್ ವಿನ್ನರ್‌ಗೆ ಸಿಕ್ಕಿದೆ ದಾಖಲೆಯ 37 ಕೋಟಿ ಮತ, ವಿನ್ನರ್ ಯಾರು
ಈ ಬಾರಿ ಬಿಗ್‌ಬಾಸ್ ಕನ್ನಡದ ಗೆಲ್ಲುವ ಅಭ್ಯರ್ಥಿಗೆ ದಾಖಲೆ ಪ್ರಮಾಣದಲ್ಲಿ ಮತಗಳು ಬಂದಿವೆ, ವೋಟಿಂಗ್ ಮುಗಿಯಲು ಒಂದು ದಿನ ಬಾಕಿ ಇರುವಾಗಲೇ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಲಭಿಸಿವೆ. ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್
ಗಂಗಾವತಿಯಲ್ಲಿ ಶೌಚಾಲಯವಿಲ್ಲದೆ ಮಹಿಳೆಯರ ಪರದಾಟ: ಸರ್ಕಾರದ ವಿರುದ್ಧ ಆರ್ ಅಶೋಕ ಕಿಡಿ
ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ ಏರಿಯಾ ಮಹಿಳೆಯರು ಸಮುದಾಯ ಶೌಚಾಲಯಕ್ಕೆ ಹೋರಾಡಿ ಬೇಸತ್ತು ಈಗ ಬಯಲನ್ನೇ ಶೌಚಾಲಯ ಮಾಡಿಕೊಂಡು ಸೀರೆಯನ್ನೇ ಬಾಗಿಲು ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಅಂಬೇಡ್ಕರ್, ಗಾಂಧಿ, ದಲಿತರ ಹೆಸರಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕಿಂತ
ಶಿವಮೊಗ್ಗದ ಮನೆಗೆ ನುಗ್ಗಿ ಹಣ, ಚಿನ್ನ ದೋಚಿದ ಕಳ್ಳರು
ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವವ ಮನೆಯೊಂದರಲ್ಲಿ ನಗದು ಮತ್ತು 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಈ ಮನೆಯ ಮಾಲೀಕ ಗೋಪಾಲ್ ಎಂಬವರು ಆರೋಗ್ಯ ಸಮಸ್ಯೆಯಿಂದ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಮಗಳು
ತುಮಕೂರಿನಲ್ಲಿ ಫಾಯಿಲ್ ಫೆನ್ಸಿಂಗ್: ಬೆಂಗಳೂರು ಹುಡುಗ-ಹುಡುಗಿಯರದ್ದೇ ದರ್ಬಾರ್
ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಮಹಿಳೆಯರ ಫಾಯಿಲ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ಗ್ರಾಮಂತರದ ಸಯೆದಾ ಇಫ್ತಾಖರ್ ಬಾನು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ಶ್ರೀರಕ್ಷಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಬೆಂಗಳೂರು ನಗರದ ಧೃತಿಕಾ ಎನ್. ಅಂದನ್ ಮತ್ತು ಪಿಸಿ ನಿಶಾ ಕಂಚಿನ
ಶಿವಮೊಗ್ಗದಲ್ಲಿ ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ: ಸವಾರ ಸಾವು
ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಗುರುಪುರ ಬಳಿ ನಡೆದಿದೆ. ಕಾಟಿಕೆರೆ ಗ್ರಾಮದ 26 ವರ್ಷದ ಮಂಜುನಾಥ್ ಮೃತ ಯುವಕ. ಹೊಳೆಹೊನ್ನೂರು ಕಡೆಯಿಂದ ಅತಿ ವೇಗವಾಗಿ ಬಂದ ಲಾರಿ ಹಿಂಬದಿಯಿಂದ
ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ ಮಹಿಳೆ!
ಮಗಳಿಗೆ ಕಂಪ್ಯೂಟರ್ ಖರೀದಿ, ಊರಿಗೆ ಹೋಳಿಗೆ ಊಟ, ವಾಷಿಂಗ್ ಮಷಿನ್ ಖರೀದಿ, ಮನೆಗೆ ಬಾಗಿಲು ಹಾಕಿಸಿದ್ದು.. ಹೀಗೆ ಗೃಹಲಕ್ಷ್ಮೀ ಹಣದಲ್ಲಿ ರಾಜ್ಯದಲ್ಲಿ ಹಲವಾರು ಕುಟುಂಬಗಳು ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇದೀಗ ಮಂಗಳೂರಿನ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾರೆ. ಅಲ್ಲದೇ ಉಪ್ಪಿನಕಾಯಿ
ಕೊಟ್ಟ ಮಾತಿನಂತೆ ಹೆತ್ತವರನ್ನು ಹೆಲಿಕಾಫ್ಟರ್ ನಲ್ಲಿ ಸುತ್ತಾಡಿಸಿದ ಸಿಂಧನೂರಿನ ಯುವಕ!
ಸಿಂಧನೂರು: ಇಂದಿನ ದಿನಮಾನದಲ್ಲಿ ತಂದೆ ತಾಯಿಯವರು ಹೇಳಿದ ಮಾತು ಕೇಳದ ಮಕ್ಕಳನ್ನು ಹೆಚ್ಚಾನೆಚ್ಚು ನೋಡ್ತಾ ಇದ್ದೇವೆ, ಸಿಂಧನೂರಿನಲ್ಲಿ ಒಬ್ಬ ಯುವಕ ತಮ್ಮ ತಂದೆ ತಾಯಿಯ ಆಸೆಯಂತೆ 6 ಲಕ್ಷ ಖರ್ಚು ಮಾಡಿ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಿಸಿರುವ ಘಟನೆ ನಡೆದಿದೆ. . ಖಾಸಗಿ
ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಕೋಲ್ಕತಾ; ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್ ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ. ವಂದೇ ಭಾರತ್ ಆವೃತ್ತಿಯ ರೈಲುಗಳ ಮೊದಲ ಸ್ಲೀಪರ್ ರೈಲು ಇದಾಗಿದ್ದು, ಅಸ್ಸಾಂನ ಗುವಾಹಟಿ ಮತ್ತು ಬಂಗಾಳದ ರಾಜಧಾನಿ
ಲಕ್ಕುಂಡಿಯಲ್ಲಿ 2ನೇ ದಿನದ ಉತ್ಖನನ ಅಂತ್ಯ: ಪುರಾತನ ಆವಶೇಷ ಪತ್ತೆ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಎರಡನೇ ದಿನದ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು, ಪ್ರಾಚೀನ ಕಾಲದ ಶಿಲೆ ಹಾಗೂ ಅಪರೂಪದ ವಸ್ತುಗಳು ಪತ್ತೆಯಾಗಿವೆ. ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉತ್ಖನನ ನಡೆದಿದ್ದು, ಅಧಿಕಾರಿಗಳು ಸೇರಿದಂತೆ 33 ಮಂದಿ ಭಾಗಿಯಾಗಿದ್ದರು. ಉತ್ಖನನ




