Menu

ಫೆ. 13ರಂದು ಹಾವೇರಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹಕ್ಕು ಪತ್ರ ವಿತರಣೆ

ರಾಜ್ಯ ಸರ್ಕಾರ ಒಂದು ಸಾವಿರ ದಿನಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆ. 13ರಂದು ಬೃಹತ್‌ ಸಾಧನಾ ಸಮಾವೇಶ ಆಯೋಜನೆ ಮಾಡಲು  ನಿರ್ಧರಿಸಿದ್ದು, ಲಕ್ಷಕೂ ಅಧಿಕ ಜನರಿಗೆ ಹಕ್ಕು ಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಹಾವೇರಿಯಲ್ಲಿ  ಸಮಾವೇಶ ಆಯೋಜನೆಯಾಗಲಿರುವ ಅಜ್ಜನ ಗುಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯೂ ಸೇರಿದಂತೆ ಹಲವು

ಬೆಳೆ ವಿಮೆ ಯೋಜನೆ ಅನುಷ್ಠಾನ: ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ದೊಡ್ಡ ರಾಜ್ಯಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕೃಷಿ ಇಲಾಖೆಗೆ ಪ್ರಶಸ್ತಿ ಸಂದಿದೆ. 27,04,166 ರೈತರು ನೋಂದಣಿ ಮಾಡಿಕೊಂಡಿದ್ದು, 11,85,642

ಸ್ಪೇನ್‌ನಲ್ಲಿ ಹೈಸ್ಪೀಡ್ ರೈಲುಗಳ ಡಿಕ್ಕಿ: 21 ಮಂದಿ ಸಾವು

ಸ್ಪೇನ್‌ನ ಆಂಡಲೂಸಿಯಾದ ದಕ್ಷಿಣ ಭಾಗದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿಯಾಗಿ 21 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿ ಹಳಿ ದಾಟಿ ಮುಂದೆ ಬರುತ್ತಿದ್ದ ರೈಲಿಗೆ

‘ದಕ್ಷಿಣ ಭಾರತ ಸಮಾಜವಾದಿ’ ಸಮಾವೇಶಕ್ಕೆ ನಾಳೆ ಸಿಎಂ ಚಾಲನೆ

ಬೆಂಗಳೂರಿನಲ್ಲಿ ನಾಳೆ (ಜ.20) ‘ದಕ್ಷಿಣ ಭಾರತ ಸಮಾಜವಾದಿ ಸಮಾವೇಶ’ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.  ಸಮಾಜವಾದಿ ಸಮಾಗಮ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ. ಬಿಜೆಪಿ ನೇತೃತ್ವದ ಕೇಂದ್ರ

ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಭಾರತದ ಶೇ 30 ಸುಂಕ ವಾಪಸ್‌ಗೆ ಆಗ್ರಹ

ಕಳೆದ ನವೆಂಬರ್‌ನಲ್ಲಿ ಅಮೆರಿಕದ ದ್ವಿದಳ ಧಾನ್ಯಗಳ ಬೆಳೆಗಳ ಮೇಲೆ ಭಾರತ ಶೇ. 30 ಸುಂಕ ವಿಧಿಸಿರುವುದನ್ನು ಕಡಿಮೆ ಮಾಡಲು ಮಾತುಕತೆ ನಡೆಸುವಂತೆ ಉತ್ತರ ಡಕೋಟಾ ಮತ್ತು ಮೊಂಟಾನಾ ಸೆನೆಟರ್‌ಗಳು ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಒತ್ತಾಯಿಸಿದ್ದಾರೆ. ಮೊಂಟಾನಾ ಮತ್ತು ಉತ್ತರ

ಲಕ್ಕುಂಡಿಯ ಮತ್ತೆ 8 ತಾಣ ಸಂರಕ್ಷಿತ ಸ್ಮಾರಕ: ಸಚಿವ ಎಚ್‌ಕೆ ಪಾಟೀಲ

ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಇನ್ನು 8 ದೇವಸ್ಥಾನ ಭಾವಿಗಳನ್ನು ಫೆಬ್ರವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ರಾಜ್ಯ ಸರ್ಕಾರ ದಿಂದ ಘೋಷಣೆ ಮಾಡಲಾಗುವುದು ಎಂದು ಪ್ರವಾಸೋದ್ಯಮ

ಶಿಕ್ಷಣದಿಂದ ವ್ಯಕ್ತಿತ್ವ ಹಾಗೂ ಮನುಷ್ಯತ್ವ ರೂಪಿಸಿಕೊಳ್ಳಲು ಸಾಧ್ಯ: ಮುಖ್ಯಮಂತ್ರಿ 

ಶಿಕ್ಷಣದಿಂದ ವ್ಯಕ್ತಿತ್ವವನ್ನು ಹಾಗೂ ಮನುಷ್ಯತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಶ್ರೀ ಮುತ್ತತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ  ಕೃಷಿಯಲ್ಲಿ ಮಹಿಳೆ ಸುಸ್ಥಿರ

ಹಾಸನದಲ್ಲಿ ಮಗನ ಚಿಕಿತ್ಸೆಗೆ ಸಾಲ ಪಡೆದಿದ್ದ ವೃದ್ಧ ದಂಪತಿ: ಮರು ಪಾವತಿಸಿಲ್ಲವೆಂದು ಮನೆ, ಕೊಟ್ಟಿಗೆಗೆ ಬೀಗ ಜಡಿದ ಫೈನಾನ್ಸ್‌

ತೆಗೆದುಕೊಂಡಿರುವ ಸಾಲ ಮರು ಪಾವತಿಸಿಲ್ಲವೆಂದು ಖಾಸಗಿ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬೀಗ ಜಡಿದು ವೃದ್ಧ ದಂಪತಿಯನ್ನು ಹೊರ ಹಾಕಿರುವ ಘಟನೆಯೊಂದು ಹಾಸನದ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ಸಣ್ಣಯ್ಯ(80), ಜಯಮ್ಮ(75)ಅವರನ್ನು ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಅವರಿಬ್ಬರೂ

ಬಿಜೆಪಿ ಸರ್ಕಾರ ಯಾವ ಪ್ರಕರಣ ಸಿಬಿಐಗೆ ವಹಿಸಿದೆ, ನಮ್ಮ ಪ್ರಶ್ನಿಸಲು ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರು ಅಧಿಕಾರದಲ್ಲಿದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು

ಪಾವಗಡದಲ್ಲಿ ಆಸ್ಪತ್ರೆಗೆ ತಂದೆ ಜಮೀನು ದಾನ: ಆ್ಯಂಬುಲೆನ್ಸ್​​ ಸಿಗದೆ ಮಗ ಸಾವು

ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಅಸ್ವಸ್ಥಗೊಂಡ ರೋಗಿಗೆ ಸಮಯಕ್ಕೆ ಸರಿಯಾಗಿ ತಾಲೂಕು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಿಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಸೈಯ್ಯದ್​​ ಅಕ್ರಮ್(42) ಮೃತಪಟ್ಟವರು. ರೋಗಿ ಸೈಯ್ಯದ್‌ಗೆ ಬಿಪಿ ಕಡಿಮೆಯಾಗಿರುವ ಕಾರಣ ಸಮುದಾಯ ಆರೋಗ್ಯ ಕೇಂದ್ರದವರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.