kannada news
ಸಿಜೆ ರಾಯ್ ಇಚ್ಚೆಯಂತೆ ತವರು ಕೇರಳ ಬದಲು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ?
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ.ಸಿಜೆ ರಾಯ್ ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಆಪ್ತರ ಬಳಿ ಈ ಹಿಂದೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಮಣ್ಣಾಗುವ ಬಗ್ಗೆ ಡಾ.ಸಿ.ಜೆ. ರಾಯ್ ಹೇಳಿಕೊಂಡಿದ್ದರು. ಅವರ ಇಚ್ಚೆಯಂತೆ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ, ಸಹೋದರ ಬಾಬು ಜೋಸೆಫ್ ಒಡೆತನದ ಕೋರಮಂಗಲದ ವೈಟ್ ಹೌಸ್‌ನಲ್ಲಿ ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ
ಬ್ಯಾಂಕ್ ಗೆ 40,000 ಕೋಟಿ ರೂ. ವಂಚನೆ: ರಿಲಾಯನ್ಸ್ ಕಮ್ಯೂನಿಕೇಷನ್ ಮಾಜಿ ಅಧ್ಯಕ್ಷ ಅರೆಸ್ಟ್
ಮುಂಬೈ: ಬ್ಯಾಂಕ್ ಗೆ 40 ಸಾವಿರ ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಆಗಸ್ಟ್ 21 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ),
ರಾಜ್ಯದಲ್ಲಿ 432 ಮಂದಿ ಅಕ್ರಮ: ವಲಸಿಗರು ಪತ್ತೆ 255 ಮಂದಿ ಗಡೀಪಾರು
ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ವಿವಿಧ ದೇಶಗಳಿಂದ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿದ್ದ 432 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ 255 ಮಂದಿಯನ್ನ ಗಡೀಪಾರು ಮಾಡಲಾಗಿದೆ. ನಗರದ ಹೊರವಲಯದಲ್ಲಿ ಅಕ್ರಮವಾಗಿ ನೆಲೆಸಿದ್ದ 53 ಮಂದಿ ಬಾಂಗ್ಲಾದೇಶಿಯರನ್ನು ಇತ್ತೀಚೆಗೆ
ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ
ತುಮಕೂರು: ಠಾಣೆಯ ವಶದಲ್ಲಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ. ವಾಹನ ಬಿಡುಗಡೆಗೆ ಒಟ್ಟು ₹1 ಲಕ್ಷ ಲಂಚಕ್ಕೆ ಬೇಡಿಕೆ
ಬಜೆಟ್ ನಲ್ಲಿ ಕನಿಷ್ಠ ಶೇ.4.71 ಪಾಲು ಕೊಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ
ಬೆಂಗಳೂರು: ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿಗಳಷ್ಟು ಆದಾಯ ಬರುತ್ತಿದೆ. ಆದರೆ ರಾಜ್ಯದ ಪಾಲನ್ನು ಈ ಬಾರಿಯ ಬಜೆಟ್ ನಲ್ಲಿ ಶೇ 4.71ಕ್ಕಿಂತ ಅಧಿಕ ಪಾಲು ನೀಡಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ. ಮುಖ್ಯಮಂತ್ರಿ
ಎಂಎಸ್‌ಎಂಇ ವಲಯಕ್ಕೆ ಅನುಗುಣವಾಗಿ ವಿಶೇಷ ಉದ್ಯೋಗ ಮೇಳ ಆಯೋಜನೆ: ಡಾ. ಶರಣಪ್ರಕಾಶ್ ಪಾಟೀಲ್ ಭರವಸೆ
ಬೆಂಗಳೂರು: ಪ್ರತಿಭಾವಂತ ಕಾರ್ಮಿಕರಿಗೆ ಗೌರವಾನ್ವಿತ ವೇತನ ನೀಡಬೇಕಾದ ಅಗತ್ಯವಿದೆ. ಇಂಥವರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಶುಕ್ರವಾರ ಆಯೋಜಿಸಿದ ಎಂಎಸ್‌ಎಂಇ ಮತ್ತು ಉದ್ಯೋಗಾವಕಾಶಗಳ
ಕೊಟ್ಟೂರಿನಲ್ಲಿ ತಂದೆ, ತಾಯಿ, ಸೋದರಿಯ ಕೊಲೆ ಮಾಡಿ ನಾಪತ್ತೆ ದೂರು
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತಂದೆ, ತಾಯಿ ಮತ್ತು ಸಹೋದರಿಯನ್ನು ವ್ಯಕ್ತಿ ಕೊಲೆ ಮಾಡಿ ನಾಪತ್ತೆ ಎಂದು ದೂರು ದಾಖಲಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸತ್ಯ ತಿಳಿದ ಕೊಟ್ಟೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಕ್ಷಯ ಕುಮಾರ ಕೊಲೆ ಮಾಡಿದ
ಹಣ ಪಡೆಯುತ್ತಿದ್ದಾಗಲೇ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ
ಪ್ರಕರಣವೊಂದರಿಂದ ಕೈಬಿಡುವುದಕ್ಕಾಗಿ ಐದು ಲಕ್ಷ ರೂ. ಲಂಚ ಕೇಳಿ ಹಣ ಪಡೆದುಕೊಳ್ಳುವಾಗ ಬೆಂಗಳೂರಿನ ಕೆ.ಪಿ. ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್‌ಸ್ಪೆಕ್ಟರ್ ಗೋವಿಂದರಾಜು ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದವರು. ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದ ಇನ್ಸ್ಪೆಕ್ಟರ್
ಗುಂಡ್ಲುಪೇಟೆಯಲ್ಲಿ ವ್ಯಕ್ತಿ ಮೇಲೆ ಚಿರತೆ ದಾಳಿ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ರಾಜಶೇಖರಪ್ಪ ಚಿರತೆ ದಾಳಿಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಾಳಿಯಿಂದ ಅವರ ಮುಖ ಹಾಗೂ ಕತ್ತಿನ ಭಾಗಕ್ಕೆ ಗಾಯಗಳಾಗಿವೆ. ಧೈರ್ಯದಿಂದ ಚಿರತೆ ದಾಳಿಯನ್ನು ಎದುರಿಸಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 56.78 ಲಕ್ಷ ರೂ. ವಂಚನೆ
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮರ್ಕೆಂಟೈಲ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 56.78 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬಯಲಾಗಿದೆ. ಬ್ಯಾಂಕ್ ಸಿಬ್ಬಂದಿ ಸುರೇಶ್ ಕಣ್ಣನ್ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೈಸೂರಿನ




