kannada news
ಜಾತಕ ತೋರಿಸಲು ಹೋದರೆ ರೇಪ್: ಮೂಡಿಗೆರೆಯಲ್ಲಿ ಅರ್ಚಕನ ಬಂಧನ
ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಯುವತಿ ಬಣಕಲ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅರ್ಚಕ ಕೃಷ್ಣರಾವ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣರಾವ್ ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ. ಜಾತಕ ತೋರಿಸಲು ಹೋದಾಗ 2025 ನವೆಂಬರ್ 23 ರಿಂದ 2026 ಫೆಬ್ರವರಿ 2ರವರೆಗೆ ಅರ್ಚಕ ಹಲವು ಬಾರಿ ಅತ್ಯಾಚಾರ
ನಮ್ಮ ಮೆಟ್ರೊ ಟಿಕೆಟ್ ದರ ಶೇ5 ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಬೋರ್ಡ್ ಸಮ್ಮತಿ
ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ5ರಷ್ಟು ಹೆಚ್ಚಿಸಲು ಬಿಎಂಆರ್‌ಸಿಎಲ್ ಬೋರ್ಡ್ ಸಮ್ಮತಿಸಿದ್ದು, ಜಾರಿಗೆ ಬರಲು ರಾಜ್ಯ ಸರ್ಕಾರದ ಅನುಮತಿ ಸಿಗಬೇಕಿದೆ. ಕಳೆದ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಬೇಸತ್ತಿರುವ ಪ್ರಯಾಣಿಕರು ಮತ್ತೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಬಿಎಂಆರ್‌ಸಿಎಲ್
ವ್ಯಕ್ತಿಯ ಕೊಲೆ: ಕಮಲಾಕರ ಭಟ್ ಸೇರಿ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಸಿದ್ದಾಪುರದಲ್ಲಿ ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ನಡೆದ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಕಮಲಾಕರ ಭಟ್ ಮತ್ತು ಆಕಾಶ್ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್ಸಿ ಕೋರ್ಟ್ ಆದೇಶ ಮಾಡಿದೆ. ಈ ಕೊಲೆ ಪ್ರಕರಣಕ್ಕೆ ಸಾರ್ವಜನಿಕ ವಲಯದಲ್ಲೂ
ಹೆಚ್‌ಡಿ ಕುಮಾರಸ್ವಾಮಿ ಮನವಿಗೆ ವಿತ್ತ ಸಚಿವೆ ಸ್ಪಂದನೆ: ಶೇ18 ತಂಬಾಕು ಅಬಕಾರಿ ಸುಂಕ ವಾಪಸ್
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಂಬಾಕು ಮೇಲೆ ವಿಧಿಸಲಾಗಿದ್ದ ಶೇ 18ರ ಅಬಕಾರಿ ಸುಂಕ ವಾಪಸ್ ಪಡೆದಿದ್ದಾರೆ. ತಂಬಾಕಿನ ಮೇಲೆ ಶೇ 18 ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು
ಆನ್‌ಲೈನ್ ಗೇಮ್ ಬೇಡವೆಂದು ಬಯ್ದಿದ್ದಕ್ಕೆ ಮೂವರು ಸೋದರಿಯರು ಸುಸೈಡ್
ಆನ್‌ಲೈನ್ ಗೇಮ್ ಆಡಬೇಡಿ, ಶಾಲೆ, ಓದಿನ ಕಡೆ ಗಮನಕೊಡಿ ಎಂದು ಮನೆಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಗದರಿದಕ್ಕೆ ಮೂವರು ಸೋದರಿಯರು ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ದಾರುಣ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಪಖಿ (12),
ಅಪರಿಚಿತರಿಂದ ಮುಅಮ್ಮರ್ ಗಡಾಫಿಯ ಪುತ್ರ ಸೈಪ್‌ಗೆ ಗುಂಡಿಕ್ಕಿ ಹತ್ಯೆ
ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪುತ್ರ ಸೈಫ್ ಅಲ್-ಇಸ್ಲಾಂರನ್ನು ಅಪರಿಚಿತ ಬಂದೂಕುಧಾರಿಗಳು ಜಿಂಟಾನ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2021ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ್ದ ಸೈಪ್‌ಗೆ ತೀವ್ರ ವಿರೋಧ ಎದುರಾಗಿತ್ತು. 53 ವರ್ಷದ ಸೈಫ್ ತಮ್ಮ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ
‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಹಾವನೂರು ಕಾರ್ಣಿಕೋತ್ಸವ ದೈವವಾಣಿ
‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂದು ಹಾವನೂರು ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕೋತ್ಸವದಲ್ಲಿ ಆನಂದ ಬಿಲ್ಲರ ಹೆಸರಿನ ಗೊರವಯ್ಯ ದೈವವಾಣಿ ನುಡಿದಿದ್ದಾರೆ. ‘ಬಿತ್ತಿ ಬೆಳೆದ ಕೈ ಬಂಗಾರದ ಕಡಗ ತೊಟ್ಟಿತ್ತಲೇ ಪರಾಕ್’ ಎಂಬ ದೈವವಾಣಿಯನ್ನು ಪ್ರಸ್ತಕ ವರ್ಷ
ಸಿರಿಗೆರೆ ಮಠದ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನ ವಿರುದ್ಧ ಪ್ರಕರಣ
ಚಿತ್ರದುರ್ಗ: ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಸಿರಿಗೆರೆಯ ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಎಂ. ರಂಗಣ್ಣ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆರೋಪಿ ಎಂ.ರಂಗಣ್ಣ ಸಿರಿಗೆರೆಯ
ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆಯ ಆಡಿಯೊ ಮಾಹಿತಿ ಸದನದ ಮುಂದಿಟ್ಟ ಆರ್ ಅಶೋಕ
ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮಂಜೂರಾತಿಗೆ ಲಂಚ, ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ. ಆದ್ದರಿಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು. ವಿಧಾನಸಭೆಯಲ್ಲಿ
ಸಾಗರ ಮಾರಿಕಾಂಬ ಜಾತ್ರೆ: ದರ್ಶನಕ್ಕೆ ತೆರಳಿದ್ದ ಕಾಗೋಡು ತಿಮ್ಮಪ್ಪ ಅಸ್ವಸ್ಥ
ಸಾಗರ ಮಾರಿಕಾಂಬ ದೇವಿ ಜಾತ್ರೆಯ ಪ್ರಯುಕ್ತ ದೇವಿಯ ದರ್ಶನಕ್ಕೆ ತೆರಳಿದ್ದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ಉಸಿರಾಟ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯ ಸರ್ಕಾರಿ




