kannada news
ಬೆಂಗಳೂರಿನ ಪಿಜಿಯಲ್ಲಿ ಹಾಸನದ ವಿದ್ಯಾರ್ಥಿನಿ ಆತ್ಮಹತ್ಯೆ, ತಂದೆಗೆ ಎಂಟು ಪುಟಗಳ ಪತ್ರ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಯಾರೂ ಇಲ್ಲದ ವೇಳೆ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆಗೆ ಎಂಟು ಪುಟದ ಡೆತ್ನೋಟ್ ಬರೆದಿದ್ದಾಳೆ. ಹೆಸರುಘಟ್ಟ ರಸ್ತೆಯ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ವಿದ್ಯಾರ್ಥಿನಿಯಾಗಿರುವ ಹಾಸನದ ವತ್ಸಲಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಪೆಟಲ್ಸ್ ಗರ್ಲ್ಸ್ ಪಿಜಿಯಲ್ಲಿ ವಾಸವಿದ್ದಳು. ಪಿಜಿಯ 3ನೇ ಮಹಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. “ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ ಅಪ್ಪ. ನೀವು
ಸ್ವಾಮೀಜಿ ಬೀದಿಗೆ ಇಳಿಯದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೇ? ಕುಮಾರಸ್ವಾಮಿ ಎಂದೂ ಒಕ್ಕಲಿಗ ಸ್ವಾಮೀಜಿ, ಜಾತಿ ಬಳಸಿಕೊಂಡಿಲ್ವಾ?
“ಕುಮಾರಸ್ವಾಮಿ ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ, ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಛೇಡಿಸಿದ್ದು, ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೇ ಎಂದು
ಸಿಂಧನೂರಿನಲ್ಲಿ ಮಗನ ಮದುವೆ ಸಂಭ್ರಮದಲ್ಲಿದ್ದಾಗಲೇ ತಂದೆಯ ಸಾವು
ಸಿಂಧನೂರು ನಗರದ ವಾರ್ಡ್ ನಂಬರ್ 14ರ ನಿವಾಸಿ, ವೀರಶೈವ ಸಮಾಜದ ಮುಖಂಡ ಶರಣಯ್ಯ ಸ್ವಾಮಿ ಶಾಸ್ತ್ರಿ ಮಠ ಕಂದಗಲ್ (47) ಮಗನ ಮದುವೆ ದಿನದಂದೇ ಹೃದಯಘಾತದಿಂದ ಭಾನುವಾರ (ಇಂದು) ಮೃತಪಟ್ಟಿದ್ದಾರೆ. ಶರಣಯ್ಯ ಸ್ವಾಮಿ ಕಳೆದ ತಿಂಗಳಿನಿಂದ ಮಗನ ಮದುವೆ ಸಂಭ್ರಮದಲ್ಲಿ ಇದ್ದು,
ನನ್ನ, ಸಿಎಂ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಡಿಕೆ ಶಿವಕುಮಾರ್ ಪುನರುಚ್ಚಾರ
“ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಡಿಸಿಎಂ ಡಿಕೆ ಶಿವಕುಮಾರ್ ಅವರು ಪುನರುಚ್ಚರಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ನಿಮ್ಮ ಹಾಗೂ ಸಿಎಂ ಉಪಹಾರ ಸಭೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಹೊಸ
ಬೆಂಗಳೂರಿನಲ್ಲಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ?
ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ದಿತ್ವಾ ಚಂಡಮಾರುತ ಎಫೆಕ್ಟ್ ತೀವ್ರಗೊಂಡಿದ್ದು, ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ತೀವ್ರ ಏರಿಕೆಯಾಗುತ್ತಿದೆ. ಕಳೆದೊಂದು ವಾರದಿಂದ ಬೆಂಗಳೂರು ಚಳಿಗೆ ಹೈರಾಣಾಗಿದ್ದು, ಮಧ್ಯಾಹ್ನದ ಸಮಯದಲ್ಲೂ ಮೈ ನಡುಗಿಸುತ್ತಿದೆ. ಶನಿವಾರ ಮತ್ತು ಇಂದು ಬೆಂಗಳೂರಿನ ತಾಪಮಾನ ಹಠಾತ್ ಕುಸಿದು
ಹುಣಸೂರಿನಲ್ಲಿ ಮೂರು ಹುಲಿ ಮರಿ ಸೆರೆ
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗೌಡನಕಟ್ಟೆ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ತಾಯಿ ಹುಲಿ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿ ಮೂರು ಮರಿಗಳನ್ನು ಹಿಡಿದಿದ್ದಾರೆ. ಗೌಡನಕಟ್ಟೆ ಗ್ರಾಮದ ಹೊರವಲಯದಲ್ಲಿ ಅಡಗಿದ್ದ ಮೂರು ಹುಲಿ ಮರಿಗಳಿಗೆ ಅರವಳಿಕೆ ನೀಡಿ
ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಆ್ಯಂಬುಲೆನ್ಸ್ ಚಾಲಕ: ಬಡ ರೋಗಿ ಕುಟುಂಬದ ರೋಧನ
ನೆಲಮಂಗಲದಲ್ಲಿ 108 ಆ್ಯಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿರುವ ಚಾಲಕ ಹಣದಾಸೆಗಾಗಿ ಬಡ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಪಾಯಿಸನ್ ಕೇಸ್ ಸಂಬಂಧ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣಮೂರ್ತಿ (30)ಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು
ನಾಯಕನಹಟ್ಟಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ: ಚಿಕಿತ್ಸೆಗೆ ಬಂದ ರೋಗಿ ಸಾವು
ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆಗೆ ಬಂದ ರೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಆಸ್ಪತ್ರೆ ವೈಧ್ಯಾಧಿಕಾರಿಗಳ ವಿರುದ್ಧ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಾಜಪ್ಪ (50) ಮೃತಪಟ್ಟವರು. ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ಕಾಲೊನಿ
ಮಂಡ್ಯದಲ್ಲಿ ರೌಡಿ ಶೀಟರ್ ಹತ್ಯೆ
ಮಂಡ್ಯದ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ತಡರಾತ್ರಿ ರೌಡಿ ಈಟರ್‌ವೊಬ್ಬನ ಬರ್ಬರ ಹತ್ಯೆಯಾಗಿದೆ. ಲಕ್ಷ್ಮೀ ಸಾಗರ ಗ್ರಾಮದ ಮಹೇಶ್(26) ಕೊಲೆಯಾದ ರೌಡಿ ಶೀಟರ್. ಲಕ್ಷ್ಮೀ ಸಾಗರ ಗ್ರಾಮದ ಮಹೇಶ್(26) ಕೊಲೆಯಾದ ರೌಡಿ ಶೀಟರ್. ತಡರಾತ್ರಿ ಜಕ್ಕನಹಳ್ಳಿ ಬಾರ್ ಬಳಿ ಯುವಕರ
ವಿಶೇಷಚೇತನರಿಗೆ ಪ್ರತ್ಯೇಕ ನಿಗಮ/ಮಂಡಳಿ ರಚನೆ: ಮುಖ್ಯಮಂತ್ರಿಗೆ ಸಚಿವ ಸಂತೋಷ್ ಲಾಡ್ ಪತ್ರ
ಸರ್ಕಾರದ ಸವಲತ್ತುಗಳನ್ನು ತ್ವರಿತವಾಗಿ ಮತ್ತು ನೇರವಾಗಿ ತಲುಪಿಸಲು ಸಾಧ್ಯವಾಗುವಂತೆ ವಿಶೇಷಚೇತನರಿಗಾಗಿಯೇ ಒಂದು ಪ್ರತ್ಯೇಕ ನಿಗಮ ಅಥವಾ ಮಂಡಳಿಯ ಸ್ಥಾಪನೆಯ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿರುವ ಸಚಿವರು,




