Menu

ಸೆಕ್ಸ್‌ ವಿಕ್ಟಿಮ್ಸ್‌ ಗುರುತು ಬಹಿರಂಗಗೊಳ್ಳುವಂತಿಲ್ಲ: ಪೊಲೀಸ್‌ ಠಾಣೆಗಳಿಗೆ ಡಿಜಿಪಿ ಸಲೀಂ ಖಡಕ್‌ ವಾರ್ನ್‌

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಂತ್ರಸ್ತರ ಹೆಸರು, ವಿಳಾಸ ಅಥವಾ ಅವರ ಗುರುತನ್ನು ಯಾವುದೇ ಹಂತದಲ್ಲಿ ಬಹಿರಂಗಪಡಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ಸ್ಥಾಯಿ ಆದೇಶ ಸಂಖ್ಯೆ 1024ರ ಅಡಿ ಸಂತ್ರಸ್ತರ ಗೌಪ್ಯತೆ ಕಾಪಾಡುವುದು ಕಡ್ಡಾಯ. ಆದರೂ ಕೆಲವು ಠಾಣೆಗಳಲ್ಲಿ ಎಫ್‌ಐಆರ್ ಮತ್ತು ತನಿಖಾ ವರದಿಗಳಲ್ಲಿ

ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ಕ್ಕೆ ಚುನಾವಣೆ

ರಾಜ್ಯಸಭೆಯ 37 ಸ್ಥಾನಗಳಿಗೆ ಹತ್ತು ರಾಜ್ಯಗಳಿಗೆ ದ್ವೈವಾರ್ಷಿಕ ಚುನಾವಣೆ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಏಪ್ರಿಲ್‌ನಲ್ಲಿ ಈ 37 ರಾಜ್ಯಸಭೆಯ ಸ್ಥಾನಗಳು ಖಾಲಿಯಾಗುತ್ತಿವೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ,

ಹುಟ್ಟುಹಬ್ಬದ ಖುಷಿಯಲ್ಲಿದ್ದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

ಬೆಂಗಳೂರಿನಲ್ಲಿ ಯುವಕನೊಬ್ಬ ಸ್ನೇಹಿತರ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ. ಬೈಕ್ ಹಾಗೂ ಅಶೋಕಾ ಲೈಲಾಂಡ್ ಡಿಕ್ಕಿಯಾಗಿ ಬೆಂಗಳೂರು ಉತ್ತರ ತೋಟದ ಗುಡ್ಡದಹಳ್ಳಿ ನಿವಾಸಿ ಪವನ್ (24) ಅಸು ನೀಗಿದ್ದಾನೆ. ಸಂಜೆ

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌: ಸೂರಜ್‌ ರೇವಣ್ಣ ಅರ್ಜಿ ವಜಾಗೊಳಿಸಿದ ಕೋರ್ಟ್‌

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೈಬಿಡುವಂತೆ ಕೋರಿ ಜೆಡಿಎಸ್ ಎಂಎಲ್​​​ಸಿ ಸೂರಜ್ ರೇವಣ್ಣ ಸಲ್ಲಿಸಿದ್ದ ಮರುಪರಿಶೀಲನಾ‌ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಸೂರಜ್ ರೇವಣ್ಣ ಅರ್ಜಿ ಸಲ್ಲಿಸಿದ್ದರು, ಆ ಅರ್ಜಿಯನ್ನು ವಜಾ

ಹತ್ತು ವರ್ಷ ಕಾನೂನು ಹೋರಾಟ: ಅಪರಿಚಿತೆಗೆ ಕಿಡ್ನಿ ದಾನಗೈದು ಇತಿಹಾಸ ಸೃಷ್ಟಿಸಿದ ಡಾ. ಥಂಕಮ್ ಎಸ್

ಜೀವಂತವಾಗಿರುವಾಗಲೇ ಕಿಡ್ನಿ ದಾನ ಮಾಡುವುದಾದರೆ ಕಿಡ್ನಿ ದಾನ ಪಡೆಯುವವರು ಸಂಬಂಧಿಕರು, ಪರಿಚಿತರು ಆಗಿರಬೇಕು. ಪೋಷಕರು, ಒಡಹುಟ್ಟಿದವರು, ಮಕ್ಕಳು ಆಗಿರಬೇಕು ಎಂಬ ನಿಯಮವಿದ್ದ ಕಾರಣ ಬೆಂಗಳೂರಿನ ವೈದ್ಯೆಯೊಬ್ಬರು 10 ವರ್ಷ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ

ದ್ವಿತೀಯ ಪಿಯು ಪರೀಕ್ಷೆ ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಎಕ್ಸಾಂ ಮಾರ್ಚ್‌ 18 ರಿಂದ

ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ವೇಳಾ ಪಟ್ಟಿ ಪ್ರಕಟವಾಗಿವೆ. ಫೆ.28 ರಿಂದ ಮಾರ್ಚ್‌ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲ, ಮೊಟ್ಟೆ ಮರಗೆಣಸು ಸೇವಿಸಿದ ಇಬ್ಬರ ಸಾವು

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲೆ, ಮೊಟ್ಟೆ ಮರಗೆಣಸು ಜೊತೆ ಪರೋಟ ತಿಂದು ಊಟ ಮುಗಿಸಿ ಹೊರಟ ಕೆಲವೇ ಕ್ಷಣಗಳಲ್ಲಿ ಇಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕೇರಳದ ವಿಳಿಂಜಂನಲ್ಲಿ ನಡೆದಿದೆ. ವಿಳಿಂಜಂನ ‘ಅಸ್ಮಾಕ್’ ಹೋಟೆಲ್‌ನಲ್ಲಿ ಊಟ ಮಾಡಿದ್ದ ಕೊಲ್ಲಂ ನಿವಾಸಿಗಳಾದ ಶಾಜಿ ಮತ್ತು ಅವರ

ಅಮೆರಿಕ ಹಾಕಿ ಕ್ರೀಡಾಂಗಣದಲ್ಲಿ ಗುಂಡಿನ ದಾಳಿಗೆ ಮೂವರು ಬಲಿ

ಅಮೆರಿಕದ ಹಾಕಿ ಕ್ರೀಡಾಂಗಣದಲ್ಲಿ ನಡೆದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ. ರೋಡ್ ಐಲೆಂಡ್ ರಾಜ್ಯದ ಪಾವ್‌ಟಕೆಟ್‌ನ ಡೆನ್ನಿಸ್ ಎಂ. ಲಿಂಚ್ ಅರೆನಾದ ಕ್ರೀಡಾಂಗಣದಲ್ಲಿ ನಡೆದ ಈ ಘಟನೆ ಭೀತಿ ಸೃಷ್ಟಿಸಿದೆ. ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿ ಮೂವರು ಪ್ರಾಣ ಕಳೆದುಕೊಂಡಿದ್ದರೆ, ಮೂವರು

ನಟಿಯ ಖಾಸಗಿ ವೀಡಿಯೊ ವೈರಲ್‌ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ

ರಿಯಾಲಿಟಿ ಶೋದಲ್ಲಿ ಗುರುತಿಸಿಕೊಂಡಿರುವ ನಟಿಯೊಬ್ಬರ ಖಾಸಗಿ ವೀಡಿಯೊ ಚಿತ್ರೀಕರಿಸಿ, ಹಣಕ್ಕಾಗಿ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ‘ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿ’ ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾಗವಹಿಸಿದ್ದ ನಟಿಯೊಬ್ಬರು

ಕೊಳ್ಳೇಗಾಲದಲ್ಲಿ ಹುಲಿ ಶವ ಪತ್ತೆ: ಉರುಳಿಗೆ ಸಿಲುಕಿ ಸಾವು, ಆರೋಪಿಗಳ ಪತ್ತೆಗೆ ಕ್ರಮ

ಚಾಮರಾಜನಗರದ ಕೊಳ್ಳೇಗಾಲ ಗುಂಡಾಲ್ ಡ್ಯಾಂನಲ್ಲಿ ಗಂಡು ಹುಲಿಯ ಶವ ಪತ್ತೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಹುಲಿಯು ಉರುಳಿಗೆ ಸಿಲುಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸ್ಕೂಟರ್ ಕ್ಲಚ್ ವೈರ್ ಕತ್ತಿಗೆ ಸಿಕ್ಕಿ ಹಾಕಿಕೊಂಡು ಹುಲಿ ಅಸು ನೀಗಿದ್ದು, ಅರಣ್ಯ ಇಲಾಖೆ ಉರುಳು ಹಾಕಿದವರ