kannada news
ಫೆ.13 ಜಾಗತಿಕ ಹೂಡಿಕೆದಾರರ ಸಮಾವೇಶ: `ಕ್ವಿನ್ ಸಿಟಿ ಕುರಿತು ರೌಂಡ್ ಟೇಬಲ್’ ಚರ್ಚೆ
ಬೆಂಗಳೂರು: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ `ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು ಪ್ರತ್ಯೇಕ ರೌಂಡ್ ಟೇಬಲ್ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ
ಎಥೆನಾಲ್ ಪ್ರಭಾವ: ಸಕ್ಕರೆ ಉತ್ಪಾದನೆ ಶೇ. 12ರಷ್ಟು ಕುಸಿತ
ನವದೆಹಲಿ: 2025ನೇ ಸಾಲಿನಲ್ಲಿ ಭಾರತದ ಸಕ್ಕರೆ ಉತ್ಪಾದನೆಯು ಗಮನಾರ್ಹ ಕುಸಿತವಾಗುವ ನಿರೀಕ್ಷೆಯಿದೆ ಎಂದು ಸೆಂಟ್ರಮ್ ವರದಿ ಹೇಳಿದೆ. ಹಿಂದಿನ ವರ್ಷದಲ್ಲಿ ಉತ್ಪಾದನೆಯಾಗಿದ್ದ 31.8 ಎಂಎಂಟಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಇದು 27 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಗಿಂತ ಕಡಿಮೆಯಾಗುವ ಮುನ್ಸೂಚನೆಗಳಿವೆ
ಕರ್ನಾಟಕ ಪಬ್ಲಿಕ್ ಶಾಲೆಗೆ ಎಡಿಬಿ 2000 ಕೋಟಿ ರೂ. ಸಾಲ: ಮಧು ಬಂಗಾರಪ್ಪ
ಹೊಸದಾಗಿ ಆರಂಭಿಸಲಾಗುತ್ತಿರುವ 450 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,000 ಕೋಟಿ ರೂ. ದೀರ್ಘಾವಧಿ ಸಾಲ ನೀಡಲು ಮುಂದಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ
ಕುಂಭಮೇಳದಲ್ಲಿ ಕಟ್ಟುನಿಟ್ಟಿನ ಸುರಕ್ಷತೆಗೆ ಪ್ರಧಾನಿ ಸೂಚನೆ: ಎಚ್.ಡಿ. ಕುಮಾರಸ್ವಾಮಿ
ಮೈಸೂರು: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ನಡೆದಿರುವ ಕಾಲ್ತುಳಿತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಸರಕಾರಕ್ಕೆ ಪ್ರಧಾನಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು
ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಢ: 100ಕ್ಕೂ ಹೆಚ್ಚು ವಾಹನ ಭಸ್ಮ
ಪೊಲೀಸರು ಜಫ್ತಿ ಮಾಡಿದ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ಸಂಭವಿಸಿದೆ. ಶೇಷಾದ್ರಿಪುರಂ ಬಳಿಯ ಜೆಡಿಎಸ್ ಕಚೇರಿ ಪಕ್ಕದಲ್ಲಿರುವ ಜಕ್ಕರಾಯನ ಕೆರೆ ಮೈದಾನದಲ್ಲಿಈ ದುರ್ಘಟನೆ ಸಂಭವಿಸಿದ್ದು, 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ. ಕಾರು, ಐದು ಆಟೋ, 50
ಸಾಲ ಕೊಡದೇ 4.20 ಲಕ್ಷ ಕಂತು ಕಟ್ಟಿಸಿಕೊಂಡ ಫೈನಾನ್ಸ್ ಕಂಪನಿ: ದಂಪತಿ ಪ್ರತಿಭಟನೆ
ಸಾಲವನ್ನೇ ಕೊಡದೇ 4.20 ಲಕ್ಷ ರೂ. ಕಂತು ವಸೂಲು ಮಾಡಿದ ಫೈನಾನ್ಸ್ ಕಂಪನಿ ವಿರುದ್ಧ ದಂಪತಿ ಪ್ರತಿಭಟನೆ ನಡೆಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೌಸಿಂಗ್ ಲೋನ್ ಕೊದೇ 10 ತಿಂಗಳಿಂದ ಇಎಂಐ ಕಟ್ಟಿಸಿಕೊಂಡ ಹಿಂದೂಜಾ ಫೈನಾನ್ಸ್ ಸಿಬ್ಬಂದಿ ವಿರುದ್ಧ ದಂಪತಿ ಮಂಗಳವಾರ
ಬೇಂದ್ರೆ ಕೃಷ್ಣಪ್ಪ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಕೃಷ್ಣಪ್ಪ ಇನ್ನಿಲ್ಲ
ಬೆಂಗಳೂರು: ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿದ್ದ ನಾಡೋಜ ಡಾ. ಜಿ. ಕೃಷ್ಣಪ್ಪ (77) ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಬೆಂಗಳೂರು ಸಮೀಪದ ಚೋಳನಾಯಕನಹಳ್ಳಿಯ ಕೃಷ್ಣಪ್ಪ ಜಿ. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗೃಹ ನಂ. 26,
ಲಡ್ಡು ಮಹೋತ್ಸವದ ವೇಳೆ ವೇದಿಕೆ ಕುಸಿದು 6 ಮಂದಿ ಸಾವು!
ಧಾರ್ಮಿಕ ಕಾರ್ಯಕ್ರಮದ ವೇಳೆ ವೇದಿಕೆ ಕುಸಿದ ಪರಿಣಾಮ 6 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಮಂದಿ ಭಕ್ತರು ಗಾಯಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಭಾಗ್ ಪತ್ ನ ಬಾರೂತ್ ನಲ್ಲಿ ಮಂಗಳವಾರ ನಡೆದ ಜೈನ ಸಮುದಾಯದ ಲಡ್ಡು ಮಹೋತ್ಸವ ಕಾರ್ಯಕ್ರಮದಲ್ಲಿ
ಸಿದ್ದರಾಮಯ್ಯ ಪತ್ನಿ, ಸಚಿವ ಭೈರತಿಗೆ ಬಿಗ್ ರಿಲೀಫ್: ಇಡಿ ತನಿಖೆಗೆ ಹೈಕೋರ್ಟ್ ತಡೆ
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ವಿಚಾರಣೆಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠ, ಇಡಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ
ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಅರೆಸ್ಟ್!
ಬೆಂಗಳೂರಿನ ಕೊಡಿಗೆಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ಗನ್ ಮ್ಯಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ದೂರಿನ ಮೇರೆಗೆ ಲಾಯರ್ ಜಗದೀಶ್, ಪುತ್ರ ಆರ್ಯನ್ ಹಾಗೂ




