Menu

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ತೀವ್ರ

ಉದ್ಯೋಗ ನೇಮಕಾತಿ ಪ್ರಕ್ರಿಯೆ ವೇಗಗೊಳಿಸಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧಾರವಾಡ ನಗರದಲ್ಲಿ ಆರಂಭಗೊಂಡಿರುವ  ಉದ್ಯೋಗಾಕಾಂಕ್ಷಿಗಳ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಇಲ್ಲಿನ  ಶ್ರೀನಗರ ಪ್ರದೇಶದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಜಮಾವಣೆಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಮಿಚಿಗನ್ ಕಂಪೌಂಡ್ ಕಡೆಗೆ ಧಾವಿಸಿದರು. ಪೊಲೀಸರು ಆರಂಭದಲ್ಲೇ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರೂ, ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪ್ರಮುಖ ರಸ್ತೆಗಳಲ್ಲಿ

ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಂತೋಷ್ ಲಾಡ್ ಸೂಚನೆ

ಸರ್ಕಾರದಿಂದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಲ್ಯಾಪ್ಸ್ ಆಗದಂತೆ ಬಳಸಬೇಕು. ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಸಾರ್ವಜನಿಕರಿಗೆ ಬೇಸಿಗೆ ದಿನಗಳಲ್ಲಿ ಯಾವುದೇ ರೀತಿ ಅನನುಕೂಲವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್  ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಧಾರವಾಡ

ಮೆಡಿಕಲ್‌ ಓದಲು ಒತ್ತಾಯಿಸಿದ ತಂದೆಯನ್ನು ಗುಂಡಿಕ್ಕಿ ಕೊಂದ ಮಗ

ಉತ್ತರಪ್ರದೇಶದ ಮೀರತ್‌ನಲ್ಲಿ ಯುವಕನೊಬ್ಬ ತಂದೆಯನ್ನು ಗುಂಡಿಕ್ಕಿ ಕೊಂದು ತುಂಡು ಮಾಡಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿರು ಪ್ರಕರಣವೊಂದು ಬಯಲಾಗಿದೆ. ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆ ಎಂದು ದೂರು ದಾಖಲಾಗಿತ್ತು. ಅವರ ಮನೆಗೆ

ಕಾಂಗ್ರೆಸ್ ಶಾಸಕನ ಕಾರಿನಲ್ಲಿ ಪ್ರೀತಂಗೌಡ: ರಾಜಕೀಯ ಸಂಚಲನ ಸೃಷ್ಟಿಸಿದ ವೀಡಿಯೊ

ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಮತ್ತು ಹಾಸನ ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ  ಒಂದೇ ಕಾರಲ್ಲಿ ಓಡಾಡುತ್ತಿರುವ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ರಾಜಕೀಯ ಸಂಚಲನ ಸೃಷ್ಟಿಸಿದೆ. ಪ್ರೀತಂಗೌಡ  ಕಾಂಗ್ರೆಸ್ ಸಖ್ಯ ಬೆಳೆಸಿದ್ದಾರೆಯೇ  ಎಂಬ

ನೌಕರಿ ಮಾಡದ ಗೃಹಿಣಿಯ ಶ್ರಮದ ನಿರ್ಲಕ್ಷ್ಯ ಸಲ್ಲ ಎಂದ ದಿಲ್ಲಿ ಹೈಕೋರ್ಟ್‌

ಗೃಹಿಣಿ ಉದ್ಯೋಗ ಮಾಡದಿರುವುದನ್ನು ಆಲಸ್ಯ ಎಂದು ವಿವರಿಸುವುದು ಸುಲಭ, ಮನೆಯನ್ನು ಉಳಿಸಿಕೊಳ್ಳುವಲ್ಲಿ ಆಕೆಯ ಶ್ರಮವನ್ನು ಗುರುತಿಸುವುದು ಹೆಚ್ಚು ಕಷ್ಟ ಎಂದು ದಿಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.  ನೌಕರಿ ಮಾಡದ ಗೃಹಿಣಿಯನ್ನು “ನಿಷ್ಕ್ರಿಯ ಹೆಂಡತಿ” ಎಂದು ಪರಿಗಣಿಸುವುದು, ಶ್ರಮವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬುದಾಗಿ

ಮನರೇಗಾ ಮರುಸ್ಥಾಪಿಸಲು ಕಾಂಗ್ರೆಸ್‌ನ ಹೋರಾಟ ಬೆಂಬಲಿಸಿ: ಮುಖ್ಯಮಂತ್ರಿ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ದೇಶಾದ್ಯಂತ

ಅಮೆರಿಕದ ದಾಳಿ ಭೀತಿ: ಇರಾನ್‌ ತೊರೆಯುವಂತೆ ಭಾರತೀಯರಿಗೆ ಎಚ್ಚರಿಕೆ

ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ವಿದೇಶಾಂಗ ಇಲಾಖೆಯು ಅಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆ ನೀಡಿ, ಆ ದೇಶವನ್ನು ತೊರೆಯಲು ಸೂಚಿಸಿದೆ. ಆದಷ್ಟು ಬೇಗ ಲಭ್ಯವಿರುವ ವಿಮಾನಗಳ ಮೂಲಕ ಭಾರತಕ್ಕೆ ಮರಳಲು ತಿಳಿಸಿದೆ. ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿ

ವೃದ್ಧೆಯ ಕೊಲೆಗೈದು ಚಿನ್ನ ದೋಚಿದ್ದ ಆನ್‌ಲೈನ್‌ ಗೇಮ್‌ ವ್ಯಸನಿ ಅರೆಸ್ಟ್‌

ದಾವಣಗೆರೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ ಚಿನ್ನ ದೋಚಿದ್ದ ಪ್ರಕರಣದಲ್ಲಿ ಆನ್‌ಲೈನ್‌ ಗೇಮ್‌ ವ್ಯಸನಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿ ಅಭಿಷೇಕ (23) ಬಂಧಿತ. ಆರೋಪಿಯನ್ನು ಬಂಧಿಸಿರುವ ಪೊಲೀಸರು

ಸಚಿವ ಮಹದೇವಪ್ಪ ನಮ್ಮ ರಾಷ್ಟ್ರೀಯ ನಾಯಕರು, ಅವರಿಗೆ ಇಲ್ಲಿಂದಲೇ ನಮಸ್ಕಾರ: ಡಿಸಿಎಂ

ಸಚಿವ ಮಹದೇವಪ್ಪ ಅವರು  ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ ಎಂದು ಡಿಕೆ ಶಿವಕುಮಾರ್‌  ತಿವಿದಿದ್ದಾರೆ.  ಸದಾಶಿವನಗರದ ನಿವಾಸದ‌ ಬಳಿ ಮಹದೇವಪ್ಪ  ಅವರು ದಲಿತ ಸಿಎಂ ವಿಚಾರ ಮಂಡಿಸಿರುವ ಬಗ್ಗೆ  ಮಾಧ್ಯಮದವರು ಪ್ರಶ್ನಿಸಿದಾಗ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ನೀರು ಗುಣಮಟ್ಟ

“ಹೇಳಿಕೆ ಆಧಾರಿತ ಪತ್ರಿಕೋದ್ಯಮವೇ ಪ್ರಧಾನ ಆಗುತ್ತಿರುವುದು ಆರೋಗ್ಯಕರ ಸಂಗತಿ ಅಲ್ಲ”

ಇಂದು ಅಭಿವೃದ್ಧಿ ಪತ್ರಿಕೋದ್ಯಮ ಪಕ್ಕಕ್ಕೆ ಸರಿದು ಹೇಳಿಕೆ ಆಧಾರಿತ ಪತ್ರಿಕೋದ್ಯಮವೇ ಪ್ರಧಾನ ಆಗುತ್ತಿರುವುದು ಆರೋಗ್ಯಕರ ಸಂಗತಿ ಅಲ್ಲ. ಹೀಗಾಗಿ ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನ ಮಾಧ್ಯಮ ಜಗತ್ತಿನ “ಮಂಥನ” ದ ವೇದಿಕೆಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ  ಕೆ.ವಿ ಪ್ರಭಾಕರ್‌ ಹೇಳಿದ್ದಾರೆ.