kannada news
ನಿಧಾನವಾಗಿ ಕಾರು ಓಡಿಸುವಂತೆ ಹೇಳಿದ್ದಕ್ಕೆ ಯವಕನಿಗೆ ಗುದ್ದಿಸಿ ಕೊಲೆ
ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಿಧಾನವಾಗಿ ಕಾರು ಓಡಿಸುವಂತೆ ತಿಳಿ ಹೇಳಿದ ಯುವಕನಿಗೆ ಗುದ್ದಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಹತ್ಯೆಯಾದ ಯುವಕನನ್ನು ಮನು (27) ಎಂದು ಗುರುತಿಸಲಾಗಿದೆ. ರಾತ್ರಿ ಮನು, ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ರಸ್ತೆ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಅತಿ ವೇಗವಾಗಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ
ಇರಾನ್-ಇಸ್ರೇಲ್ ಸಂಘರ್ಷ: ದೇಶದಲ್ಲಿ ಹಿಂಸಾಚಾರ ಸಾಧ್ಯತೆ, ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕ ನಡೆಸಿದ ದಾಳಿಯಲ್ಲಿ ಖಮೇನಿ ಸಾವಿನ ಬಳಿಕ ಇರಾನ್ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ದಾಳಿ ನಡೆಸಿದೆ. ದಾಳಿ, ಪ್ರತಿದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪರಿಣಾಮವಾಗಿ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಎಲ್ಲಾ
ಡಿಸಿಎಂ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯಿಂದ ಅನಧಿಕೃತ ತಂಡ: ಆರ್ ಅಶೋಕ ಗಂಭೀರ ಆರೋಪ
ಡಿಸಿಎಂ ಡಿಕೆ ಶಿವಕುಮಾರ್ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿಎಂ ಸಿದ್ದರಾಮಯ್ಯ ಎಸ್‌ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ. ಅನುದಾನ ಕಡಿತ ಮಾಡುವುದು, ಫೋನ್ ಟ್ಯಾಪ್ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಕಣ್ಣಿಗೆ ಕಾಣದ ಎಸ್‌ಐಟಿ ಎಂದು ಪ್ರತಿಪಕ್ಷ
ಇರಾನ್-ಇಸ್ರೇಲ್ ಸಂಘರ್ಷ: ಅಮೆರಿಕ ಬೆಂಬಲಕ್ಕೆ ಬ್ರಿಟನ್, ಫ್ರಾನ್ಸ್, ಜರ್ಮನಿ
ಇರಾನ್-ಇಸ್ರೇಲ್ ಸಂಘರ್ಷ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಮಧ್ಯಪ್ರಾಚ್ಯ ಉದ್ವಿಗ್ನಗೊಂಡಿದೆ. ಇರಾನ್‌ನ ಸೇನಾ ಪ್ರತಿದಾಳಿಯನ್ನು ಎದುರಿಸಲು ಅಮೆರಿಕ ಜೊತೆ ಕೈಜೋಡಿಸುವುದಾಗಿ ಬ್ರಿಟನ್ , ಫ್ರಾನ್ಸ್ ಮತ್ತು ಜರ್ಮನಿ ಮುಂದಾಗಿವೆ. ಈ ದೇಶಗಳ ಉನ್ನತ ನಾಯಕರಾದ ಕೀರ್ ಸ್ಟಾರ್ಮರ್, ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಡ್ರಿಕ್
ಇರಾನ್ ಪ್ರತಿದಾಳಿಯಲ್ಲಿ ಅಮೆರಿಕದ 560 ಸೈನಿಕರ ಸಾವು?
ಅಮೆರಿಕದ ವಿರುದ್ಧ ನಡೆಸಿದ ಪ್ರತಿದಾಳಿಯ ಭಾಗವಾಗಿ ಆ ದೇಶದ ಮಿಲಿಟರಿ ನೆಲೆಗಳ ಮೇಲೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದು, ಅಮೆರಿಕದ 560 ಸೈನಿಕರು ಹತರಾಗಿರುವುದಾಗಿ ಎಂದು ಇರಾನ್ ಹೇಳಿದೆ. ಕುವೈತ್‌ನಲ್ಲಿರುವ ಅಮೆರಿಕ ನೆಲೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯೂ ಡ್ರೋನ್
ಶ್ರೀಶೈಲದಲ್ಲಿ ಮಾರ್ಚ್ 16- 20 ಯುಗಾದಿ ಮಹೋತ್ಸವ
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಾರ್ಚ್ 16ರಿಂದ 20ರವರೆಗೆ ಯುಗಾದಿ ಮಹೋತ್ಸವ ಆಚರಣೆ ನಡೆಯಲಿದ್ದು, ಉತ್ಸವ ಪ್ರಾರಂಭವಾಗುವ ಮೊದಲು ಮಾರ್ಚ್ 06ರಿಂದ 15ರವರೆಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ
ರಂಭಾಪುರಿ ಮಠದ ಭವನಕ್ಕೆ ಐದು ಕೋಟಿ ರೂಪಾಯಿ: ಡಿಕೆ ಶಿವಕುಮಾರ್
“ರಂಭಾಪುರಿ ಶ್ರೀಗಳು ನಿಂತು ಹೋಗಿದ್ದ ಭವನಕ್ಕೆ ನೀವು ಸಹಾಯ ಮಾಡಬೇಕು ಎಂದು ಹೇಳಿದ್ದರು. ನಾನು ಈ ಹಿಂದೆ ಸ್ವಲ್ಪ ಅಡಚಣೆಗಳಿವೆ ಎಂದು ತಡೆಯಲು ಹೇಳಿದ್ದೆ. ಈಗ ಸಮಯ ಒದಗಿ ಬಂದಿದೆ. ಐದು ಕೋಟಿ ರೂಪಾಯಿ ನೀಡಲಾಗುವುದು. ನಾನೇ ಖುದ್ದಾಗಿ ಬಂದು ಅದನ್ನು
ಖಮೇನಿ ಮಾತ್ರವಲ್ಲ, ಇರಾನ್‌ನ 48 ನಾಯಕರನ್ನು ಹೊಡೆದುರುಳಿಸಿದ್ದೇವೆ ಎಂದ ಟ್ರಂಪ್
ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಭೀಕರ ದಾಳಿಗಳನ್ನು ನಡೆಸಿದ್ದು, ಅಲ್ಲಿನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಮಾತ್ರವಲ್ಲದೆ ಅಲ್ಲಿನ 48 ನಾಯಕರನ್ನು ಹೊಡೆದುರುಳಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಈ ದಾಳಿಯಲ್ಲಿ ನಾವು ಪಡೆಯುತ್ತಿರುವ ಯಶಸ್ಸು ನಂಬಲು
ಇರಾನ್-ಇಸ್ರೇಲ್ ಸಂಘರ್ಷ ತೀವ್ರ: ಇರಾನ್ ಶಾಲೆ ಮೇಲಿನ ದಾಳಿಗೆ ಐವರು ಬಲಿ
ಇರಾನ್ ಹಾಗೂ ಇಸ್ರೇಲ್ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಇರಾನ್‌ನ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡು ಐವರು ಮೃತಪಟ್ಟಿದ್ದಾರೆ. ಅಮೆರಿಕ ಆರಂಭಿಸಿದ ಯುದ್ಧದಲ್ಲಿ ಇಸ್ರೇಲ್ ಕೂಡ ಕೈ ಜೋಡಿಸಿದ್ದು, ಪರಿಸ್ಥಿತಿ ವಿಷಮಿಸುತ್ತಿದೆ. ಇರಾನ್
ಮಗು, ಬಾಣಂತಿ ಸೇರಿ ಕುಟುಂಬವನ್ನು ಮನೆಯಿಂದ ಹೊರ ಹಾಕಿದ ಫೈನಾನ್ಸ್ ಕಂಪನಿ
ಬೆಳಗಾವಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಕಿರುಕುಳದಿಂದ ಕುಟುಂಬ ಬೀದಿಗೆ ಬಿದ್ದಿದೆ. ಕಂಪನಿಯು ಮನೆ ಸೀಜ್ ಮಾಡಿದ್ದು, ಮೂರು ತಿಂಗಳ ಮಗು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ.




