Kannada film industry
ನಟ್ ಬೋಲ್ಟ್ ಟೈಟ್ ಹಗರಣದ ಸುತ್ತಮುತ್ತ
ಸತ್ಯನಾರಾಯಣ ಪೂಜೆಗೆ ಆಹ್ವಾನವಿಲ್ಲದ್ದರೂ ಹೋಗಿ ಪ್ರಸಾದ ಸ್ವೀಕರಿಸಿ ಬರುತ್ತಾರಂತೆ. ಹಾಗೆಯೇ ಚಿತ್ರೋದ್ಯಮದವರು ಸ್ವಲ್ಪ ಅಹಂ ಬಿಟ್ಟು ಆಮಂತ್ರಣಕ್ಕೆ ಕಾಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡತನ ಮೆರೆಯಬಹುದಿತ್ತು. ಮನೆಯಲ್ಲಿ ನಡೆಯುವ ಮನೆಯ ಕಾರ್ಯಕ್ರಮಕ್ಕೆ ಮನೆಯರಿಗೆ ಆಮಂತ್ರಣ ನೀಡುವ ಸಂಪ್ರದಾಯ ಎದರೂ ಇದೆಯೇ? ಇಂಥ ಕಾರ್ಯಕ್ರಮಗಳಿಗೆ ನೂರಕ್ಕೆ ನೂರರಷ್ಟು ಭಾಗವಹಿಸುವಿಕೆ ನಿರೀಕ್ಷಿಸುವುದು ಕಷ್ಟ. ಆದರೆ, ಒಂದು ಗೌರವಾನ್ವಿತ ಸಂಖ್ಯೆ ಯಲ್ಲಿ ಭಾಗವಹಿಸಿದ್ದರೆ ಇಂತಹ ವಿವಾದಕ್ಕೆ ಆಸ್ಪದ ಇರುತ್ತಿರಲಿಲ್ಲ. ಕೆಲವರು ಬರದಿದ್ದರೆ ಆ ಮಾತು ಬೇರೆ.