Menu

ನೆಲಮಂಗಲದಲ್ಲಿ 24ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರ 24ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಲಸೂರು ಮೂಲದ ಲೋಕೇಶ್ ಪವನ್ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡವರು. ಲೋಕೇಶ್‌ನ ಅಕ್ಕ ಹಾಗೂ ಭಾವ ಇದೇ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾವ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಅಕ್ಕ ಗರ್ಭಿಣಿಯಾಗಿದ್ದರಿಂದ ತವರು ಮನೆಗೆ ಬಂದಿದ್ದರು. ಲೋಕೇಶ್ ಅಕ್ಕನ ಮನೆಯ ಕೀ ತೆಗೆದುಕೊಂಡು ಅಪಾರ್ಟ್ಮೆಂಟ್‌ಗೆ ಬಂದಿದ್ದ. ಎರಡು ದಿನ ಮನೆಯಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದ ಕಾರಣಕ್ಕೆ ಆತ್ಮಹತ್ಯೆ