Menu

ಜೆಇಇ ಮೈನ್‌ ಎಕ್ಸಾಂ ಫಲಿತಾಂಶ ಪ್ರಕಟ: ಕರ್ನಾಟಕದಿಂದ ಕುಶಾಗ್ರ ಗುಪ್ತ ಟಾಪರ್‌

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇ ಮುಖ್ಯ ಸೆಷನ್ 2 ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 24 ಅಭ್ಯರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಕರ್ನಾಟಕದಿಂದ ಕುಶಾಗ್ರ ಗುಪ್ತ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ರಾಜಸ್ತಾನದ ೭ ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ಅಭ್ಯರ್ಥಿಗಳು JEE ಮುಖ್ಯ ಅಧಿಕೃತ ವೆಬ್‌ಸೈಟ್ jeemain.nta.nic.in ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದು.