JDS Congress
ಗ್ಯಾರಂಟಿ ಹಣ ಜಮಾ ದಿನಾಂಕ ಘೋಷಣೆ ಮಾಡಿ: ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ನ ಗ್ಯಾರಂಟಿ ಹಣ ಫಲಾನುಭವಿಗಳ ಕೈಗೆ ಸಿಗದೆ ನಾಲ್ಕೈದು ತಿಂಗಳಾಯ್ತು , ಹಣನೇ ಬಂದಿಲ್ಲ . ಯಾವುದಾದರು ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆ ಆಗುತ್ತೆ, ಕಾರಣ ಬೇಡ, ತಕ್ಷಣ ಹಣ ವರ್ಗಾಯಿಸಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಆಗಿರುವ ಶ್ರೀ ಸಿದ್ದರಾಮಯ್ಯ ನವರು ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ 3-4 ತಿಂಗಳು ಕಾಯಬೇಕಾಗಿದೆ.


